ಗಣಿ ಲೂಟಿ 1: ಕುಮಾರಸ್ವಾಮಿ ಕಾಲದಲ್ಲೇ ಹೆಚ್ಚು ದೋಚಿದ್ದು

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ 11 ಸಾವಿರ ಕೋಟಿ ರೂ. ನಷ್ಟವುಂಟಾಗಿದೆ. ಈ ಅವಧಿಯಲ್ಲಿ 65 ಲಕ್ಷ ಮೆಟ್ರಿಕ್ ಟನ್ ಅದಿರು ಅಕ್ರಮವಾಗಿ ವಿದೇಶಕ್ಕೆ ರಫ್ತಾಗಿರುವ ಮಾಹಿತಿ ಲೋಕಾಯುಕ್ತ ವರದಿಯಲ್ಲಿದೆ.
2006-07 ಮತ್ತು 2007ರ ಸೆಪ್ಟೆಂಬರ್ ವರೆಗಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆಂಧ್ರ ಪ್ರದೇಶದ ಕಾಕಿನಾಡ, ವಿಶಾಖಪಟ್ಟಣ, ಗೋವಾ, ಚೆನ್ನೈ ಬಂದರುಗಳಿಂದ ಅಕ್ರಮವಾಗಿ ಅತಿ ಹೆಚ್ಚು ಕಬ್ಬಿಣದ ಅದಿರು ರಫ್ತಾಗಿರುವುದು ಲೋಕಾಯುಕ್ತ ತನಿಖೆಯಿಂದ ಬೆಳಕಿಗೆ ಬಂದಿದೆ.
ಬಿಎಸ್‌ಕೆ ಟ್ರೇಡಿಂಗ್ ಕಂಪನಿ ಅದಿರು ರಫ್ತಿನಲ್ಲಿ ಪ್ರಮುಖ ಪಾತ್ರವಹಿಸಿದ್ದರೂ, ಇದು ಯಾವ ರೀತಿ ಲಾಭ ಮಾಡಿಕೊಂಡಿದೆ ಎಂಬುದರ ವಿವರ ಲೋಕಾಯುಕ್ತ ವರದಿಯಲ್ಲಿ ಇಲ್ಲ. ಒಟ್ಟಾರೆಯಾಗಿ ಎಚ್.ಡಿ. ಕುಮಾರಸ್ವಾಮಿ ಅವಧಿಯಲ್ಲೇ ಅತಿ ಹೆಚ್ಚು ಅಕ್ರಮ ಗಣಿಗಾರಿಕೆ ನಡೆದಿರುವುದು ಲೋಕಾಯುಕ್ತರು ನೀಡಿರುವ ಅಂಕಿ ಅಂಶದಿಂದ ಖಚಿತಗೊಂಡಿದೆ.
ಆದರೆ ಎರಡು ಕಂಪನಿಗಳಿಗೆ ಪರವಾನಗಿ ಕೊಡಿಸಿ ಸರ್ಕಾರದ ಬೊಕ್ಕಸಕ್ಕೆ 250 ಕೋಟಿ ರೂ. ನಷ್ಟವುಂಟು ಮಾಡಿರುವ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಅದೇ ವಿಷಯವನ್ನು ಲೋಕಾಯುಕ್ತರು ತಮ್ಮ ವರದಿಯಲ್ಲಿಯೂ ಪ್ರಸ್ತಾಪಿಸಿದ್ದಾರೆ.












Click it and Unblock the Notifications