ಬೆಂಗಳೂರು, ಆಗಸ್ಟ್ 01: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ 2008-09 ಮತ್ತು 2009-10ನೇ ಸಾಲಿನಲ್ಲಿ 86 ಲಕ್ಷ ಮೆಟ್ರಿಕ್ ಟನ್ ಅದಿರು ಅಕ್ರಮವಾಗಿ ವಿದೇಶಕ್ಕೆ ರಫ್ತಾಗಿದೆ. ಈ ಅವಧಿಯಲ್ಲಿ 1,850 ಕೋಟಿ ರೂ. ನಷ್ಟವುಂಟಾಗಿದೆ ಎಂದು ಲೋಕಾಯುಕ್ತ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಸಮಗ್ರವಾಗಿ, 2003 ರಿಂದ 2010ರ ವರೆಗೆ ಒಟ್ಟಾರೆ 3 ಕೋಟಿ 6 ಲಕ್ಷ ಮೆಟ್ರಿಕ್ ಟನ್ ಅದಿರು ವಿದೇಶದ ಪಾಲಾಗಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ 16,085 ಕೋಟಿ ರೂ. ನಷ್ಟವುಂಟಾಗಿದೆ ಎಂದು ಲೋಕಾಯುಕ್ತರು ವರದಿಯಲ್ಲಿ ಅಂದಾಜು ಮಾಡಿದ್ದಾರೆ.
Who moved my Cheese? : As per the Lokayukta Justice Santosh Hegde report on Illegal Mining in Karnataka during Chief Minister B.S. Yeddyurappa administration the State exchequer incurred a loss of Rs. 1850 crore.