ಸದಾನಂದ ಗೌಡ ಮುಖ್ಯಮಂತ್ರಿಯಾಗಲಿ: ಯಡ್ಡಿ ಸೂಚನೆ
ಬೆಂಗಳೂರು
ಜು 31: ಸದಾ ರಾಜ್ಯದ ಹಿತವನ್ನು ಬಯಸುವ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಡಿವಿ ಸದಾನಂದ ಗೌಡ ಅವರ ಹೆಸರನ್ನು ಸೂಚಿಸಿದ್ದಾರೆ. ಅಮಾವಾಸ್ಯೆ ಕಳೆದು ಶ್ರಾವಣದ ಪ್ರಥಮ ದಿನದಿಂದ ರಾಜ್ಯಕ್ಕೆ ಒಳ್ಳೆಯ ದಿನಗಳು ಆರಂಭವಾಗಲಿ ಎಂದು ಮಹೂರ್ತ ನೋಡಿಕೊಂಡು ತಮ್ಮ ರಾಜೀನಾಮೆ ಪತ್ರ ನೀಡಿದ ನಂತರ, ಈ ಶಿಫಾರಸ್ಸು ಮಾಡಿದ್ದಾರೆ. id="toptextpromo">ಹೈಕಮಾಂಡ್
ಗೆ ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸಿದ ನಂತರ ಸಂಸದ ಡಿವಿ ಸದಾನಂದ ಗೌಡ ಅವರೊಟ್ಟಿಗೆ ಚರ್ಚೆ ನಡೆಸಿದರು. ನಂತರ ಸದಾನಂದ ಗೌಡರು ವಿ ಸೋಮಣ್ಣ, ಮುರುಗೇಶ್ ನಿರಾಣಿ, ಕೃಷ್ಣಯ್ಯ ಶೆಟ್ಟಿ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಶಾಸಕರು, ಸಚಿವರುಗಳ ಜೊತೆ ಸಮಾಲೋಚನೆ ನಡೆಸಿದರು. ಆದರೆ, ಸರ್ಕಾರ ಹೋದರೂ ಚಿಂತೆಯಿಲ್ಲ ಸದಾನಂದ ಗೌಡರ ಆಯ್ಕೆ ಮಾಡುವುದು ಬೇಡ ಎಂದು ಈಶ್ವರಪ್ಪ ಪಟ್ಟು ಹಿಡಿದು ಕುಳಿತಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಿಜೆಪಿ
ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ತಂಡದ ವಿಶೇಷ ಅಹ್ವಾನಿತರಾಗಿ ಸ್ಥಾನ ಪಡೆದಿರುವ ಡಿವಿ ಸದಾನಂದ ಗೌಡರಿಗೆ ಕಾರ್ಯಕರ್ತರು ಈಗಾಗಲೇ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಆದರೆ, ಸದಾನಂದ ಗೌಡರ ಆಯ್ಕೆ ಬಗ್ಗೆ ಬಿಜೆಪಿ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಬೇಕಿದೆ.











Click it and Unblock the Notifications