ಯಾವುದೇ ಫೋನ್ ಟ್ಯಾಪ್ ಮಾಡಲು ಅನುಮತಿ ನೀಡಿಲ್ಲ

ಫೋನ್ ಟ್ಯಾಪಿಂಗ್‌ಗೆ ನೀವೇನಾದರೂ ಅನುಮತಿ ನೀಡಿದ್ದರಾ? ಎಂಬ ಬಗ್ಗೆ ವಿವರ ನೀಡುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಕೇಂದ್ರದ ಈ ಪ್ರಶ್ನೆಗೆ ರಾಜ್ಯ ಸರ್ಕಾರ ನಕಾರಾತ್ಮಕ ಉತ್ತರ ನೀಡಿದ್ದೂ ಆಗಿದೆ.
ಕದ್ದಾಲಿಕೆ ಬಗ್ಗೆ ಸಂಪೂರ್ಣ ವಿವರ ಕೊಡಿ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಎಸ್.ವಿ ರಂಗನಾಥ್ ಹಾಗೂ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ಎಸ್.ಎಂ. ಜಾಮದಾರ್ ಅವರಿಗೆ ಕೇಂದ್ರ ಪತ್ರ ಬರೆದಿತ್ತು. ಈ ಕುರಿತಂತೆ ಎಸ್.ಎಂ. ಜಾಮದಾರ್ ಅವರನ್ನು ಕೇಳಿದಾಗ, ಕೇಂದ್ರ ಗೃಹ ಇಲಾಖೆಯು ವಿವರಣೆ ಕೇಳಿ ಪತ್ರ ಬರೆದಿರುವುದು ನಿಜ. ಶುಕ್ರವಾರವೇ ಅದಕ್ಕೆ ಉತ್ತರ ಕಳುಹಿಸಲಾಗಿದೆ.
ಕಳೆದ ಮೂರು ತಿಂಗಳಲ್ಲಿ ಲೋಕಾಯುಕ್ತ ಇರಲಿ, ಮತ್ಯಾರದೇ ಫೋನ್ ಟ್ಯಾಪ್ ಮಾಡಲು ನಮ್ಮ ಇಲಾಖೆ ಅನುಮತಿ ನೀಡಿಲ್ಲ. ಲೋಕಾಯುಕ್ತರ ಫೋನ್ ಯಾವತ್ತೂ ಟ್ಯಾಪ್ ಮಾಡಿಲ್ಲ ಎಂದು ಉತ್ತರ ಕಳುಹಿಸಲಾಗಿದೆ. ಫೋನ್ ಟ್ಯಾಪ್ ಮಾಡಲು ನಮ್ಮ ಇಲಾಖೆಯಿಂದ ಯಾರೂ ಅನುಮತಿಯನ್ನೂ ಕೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications