ರಚ್ಚೆ ಹಿಡಿದು ಕೂತ ಯಡಿಯೂರಪ್ಪ, ರಾಜೀನಾಮೆ ವಿಳಂಬ

BS Yeddyurappa
ಬೆಂಗಳೂರು ಜು 31: ಎಳೆ ಮಕ್ಕಳಂತೆ ರಚ್ಚೆ ಹಿಡಿದು ಕುಳಿತಿರುವ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಾಜೀನಾಮೆ ನೀಡಲು ಹೈಕಮಾಂಡ್ ನೀಡಿದ್ದ ಗಡುವು ಮೀರಿದೆ. ತಾವು ಸೂಚಿಸಿರುವ ವ್ಯಕ್ತಿಯನ್ನು ಹೊಸ ನಾಯಕ(ಸದಾನಂದ ಗೌಡ)ನನ್ನಾಗಿ ಆರಿಸಿದ ನಂತರವಷ್ಟೇ ರಾಜೀನಾಮೆ ನೀಡುವೆ ಎಂದು ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ.

ಬಿಜೆಪಿ ಹೈಕಮಾಂಡ್ ಕೂಡಾ ರಾಜೀನಾಮೆ ನೀಡಲು ಯಡಿಯೂರಪ್ಪ ಅವರಿಗೆ ಮಧ್ಯಾಹ್ನ2.30 ಗಂಟೆ ತನಕ ಗಡುವು ನೀಡಿತ್ತು. ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ನಂತರವಷ್ಟೇ ಹೊಸ ನಾಯಕನನ್ನು ಘೋಷಿಸುವುದಾಗಿ ಹೇಳಿದ್ದಾರೆ. ಆದರೆ, ಯಡಿಯೂರಪ್ಪ ಅವರು ರಾಜೀನಾಮೆ ನೀಡದೆ ರಾಜ್ಯಪಾಲರ ಭೇಟಿಗೆ ಸಮಯವನ್ನು ನಿಗದಿ ಪಡಿಸಿಲ್ಲ.

ಎಲ್ಲವೂ ಯಡ್ಡಿ ತಂತ್ರ: ಸಾವಿರಾರು ಜನರು ಸೇರಿದ್ದ ಬಲಿಜ ಸಮಾವೇಶದಲ್ಲಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದ ಯಡಿಯೂರಪ್ಪ, ನನ್ನ ಸ್ನೇಹಿತನೇ ಮುಖ್ಯಮಂತ್ರಿ ಆಗುತ್ತಾನೆ ಎಂದಿದ್ದರು. ಆದರೆ, ಮನೆಗೆ ಬಂದ ಮೇಲೆ ಹೊಸ ನಾಟಕ ಆರಂಭಿಸಿದ್ದಾರೆ. ತಾನು ಸೂಚಿಸಿದ ವ್ಯಕ್ತಿಯನ್ನೇ(ಸದಾನಂದ ಗೌಡ) ಆರಿಸಬೇಕು ಎಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ.

ಅವರಿಗೆ ಅವರ ಆಪ್ತ ಶಾಸಕರು ಸಚಿವರು ಬೆಂಬಲವಾಗಿ ನಿಂತಿದ್ದು, ಯಡಿಯೂರಪ್ಪ ಅವರನ್ನು ರೇಸ್ ಕೋರ್ಸ್ ನಿವಾಸದಿಂದ ಹೊರ ಹೋಗದಂತೆ ದಿಗ್ಬಂಧನ ವಿಧಿಸಿದ್ದಾರೆ. ರೇಸ್ ಕೋರ್ಸ್ ನಿವಾಸದ ಹೊರಗಡೆ ನೂರಾರು ಬೆಂಬಲಿಗರು ಯಡಿಯೂರಪ್ಪ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಸಂಜೆ 4.30 ದಾಟಿದರೆ ರಾಜೀನಾಮೆ ನೀಡಲು ರಾಹುಕಾಲ ಅಡ್ಡಿ ಬರುತ್ತದೆ. ಆಗ ರಾಜೀನಾಮೆ ನೀಡಲೇ ಬೇಕಾದರೆ ಹೈಕಮಾಂಡ್ ಯಡಿಯೂರಪ್ಪ ಅವರ ಮಾತು ಕೇಳಲೇ ಬೇಕಾಗುತ್ತದೆ. ಇದು ಯಡ್ಡಿ ರಾಜಕೀಯ ನಾಟಕದ ಹೊಸ ತಿರುವು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+