ಅನ್ಯರು ಮುಮಂ ಆದರೆ ಆಳಲು ಯಡ್ಡಿ ಬಿಡಲ್ಲ : ಯತ್ನಾಳ್

ಸದಾನಂದ ಗೌಡ, ಅನಂತ ಕುಮಾರ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಲಾರರು. ಅಕಸ್ಮಾತ ಯಾರಾದರೂ ಸಿಎಂ ಆದರೆ ಅವರು ಮೂರು ತಿಂಗಳು ಅಧಿಕಾರ ನಡೆಸಲು ಯಡಿಯೂರಪ್ಪ ಬಿಡುವುದಿಲ್ಲ. ಶೋಭಾ ಕರಂದ್ಲಾಜೆ ಸಿಎಂ ಆದರೆ ಮಾತ್ರ ಯಡಿಯೂರಪ್ಪ ಬೆಂಬಲಿಸುತ್ತಾರೆ ಎಂದು ಯತ್ನಾಳ ಲೇವಡಿ ಮಾಡಿದರು.
ಯಡಿಯೂರಪ್ಪನವರು ಹಠಮಾರಿ ಧೋರಣೆಯನ್ನು ನೋಡಿದರೆ ದಕ್ಷಿಣ ಭಾರತದಲ್ಲಿ ಬಿಜೆಪಿ ಮೊದಲ ಹಾಗೂ ಕೊನೆಯ ಮುಖ್ಯಮಂತ್ರಿ ಆಗಲು ನಿರ್ಧರಿಸಿದಂತೆ ಕಾಣುತ್ತದೆ ಎಂದು ಬಸವನಗೌಡ ಪಾಟೀಲ್ ಯತ್ನಳ ಕಟಕಿಯಾಡಿದರು.
ನಂತರ ಮಾತನಾಡಿದ ಹೈದರಾಬಾದ್ ಕರ್ನಾಟಕ ಜೆಡಿಎಸ್ ಕೋರ್ ಕಮೀಟಿ ಅಧ್ಯಕ ಸೂರ್ಯನಾರಾಯಣ ರೆಡ್ಡಿ. ಬಳ್ಳಾರಿ ರಾಷ್ಟ್ರಮಟ್ಟಲ್ಲಿಯೇ ಅಕ್ರಮ ಗಣಿಗಾರಿಕೆಯಿಂದ ಕೆಟ್ಟ ಹೆಸರು ಪಡೆದಿದೆ. ಜನಾರ್ದನ ರೆಡ್ಡಿ ಮಹಾನ್ ಸುಳ್ಳುಗಾರ. ಅಕ್ರಮ ಗಣಿಗಾರಿಕೆಯಿಂದ ಮೈಸೂರು ಮಹಾರಾಜರ ಅರಮನೆಯಂತೆ ಬಳ್ಳಾರಿಯಲ್ಲಿ ಮನೆ ಕಟ್ಟಿಕೊಂಡಿದ್ದಾರೆ ಎಂದರು.












Click it and Unblock the Notifications