ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯ ನ್ಯಾಯಮೂರ್ತಿ ದಿನಕರನ್ ಕೊನೆಗೂ ರಾಜೀನಾಮೆ

By Srinath
|
Google Oneindia Kannada News

Sikkim High Court Chief Justice P D Dinakaran submits resignation
ನವದೆಹಲಿ, ಜುಲೈ 30: ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜೀನಾಮೆ ನಿರೀಕ್ಷೆಯಲ್ಲಿರುವ ಕರ್ನಾಟಕದ ಜನತೆಗೆ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ.ಡಿ. ದಿನಕರನ್ ಅವರು ರಾಜೀನಾಮೆ ವಿಷಯ ಕೇಳಿಬಂದಿದೆ.

ಇದೇ ವೇಳೆ ಯಡಿಯೂರಪ್ಪ ಅವರ ರಾಜೀನಾಮೆ ಬಹುತೇಕ ಖಚಿತವಾಗಿದ್ದು, ವರಿಷ್ಠರ ಕರೆಯ ಮೇರೆಗೆ ಹೋಟೆಲ್ ಅಶೋಕಕ್ಕೆ ಧಾವಿಸಿರುವ ಯಡಿಯೂರಪ್ಪ ರಾಜೀನಾಮೆ ನಿರ್ಧಾರವನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಿಸುವ ಲಕ್ಷಣಗಳು ಗೋಚರಿಸುತ್ತಿವೆ.

ಭ್ರಷ್ಟಾಚಾರ ಆರೋಪದ ಮೇಲೆ ವಾಗ್ದಂಡನೆ ಎದುರಿಸುತ್ತಿರುವ ಸಿಕ್ಕಿಂ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ತಮ್ಮ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ದಿನಕರನ್ (61) ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಕಳುಹಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಮುಂದಿನ ವರ್ಷ ಮೇ 5ರಂದು ಅವರು ನಿವೃತ್ತಿಯಾಗಬೇಕಿತ್ತು.

ಭೂ ಕಬಳಿಕೆ ಮತ್ತು ಆದಾಯಕ್ಕೆ ಮೀರಿದ ಆಸ್ತಿ ಸಂಪಾದನೆ ಆರೋಪದ ಬಗ್ಗೆ ತನಿಖೆ ನಡೆಸಲು ರಾಜ್ಯಸಭೆಯ ಸಭಾಪತಿ ನೇಮಿಸಿದ್ದ ಮೂವರು ಸದಸ್ಯರ ತನಿಖಾ ಸಮಿತಿಯು ವಿಚಾರಣೆ ನಡೆಸುವ ಮೊದಲೇ ಅವರು ರಾಜೀನಾಮೆ ನೀಡಿದ್ದಾರೆ.

ಒಟ್ಟಾರೆ ಈಗ ಏನು ನಡೆಯುತ್ತಿದೆ ಆ ಬಗ್ಗೆ ಅವರಿಗೆ ಸಮಾಧಾನ ಇರಲಿಲ್ಲ. ಅಧಿಕಾರ ಸ್ಥಾನದಲ್ಲಿ ಮುಂದುವರಿದರೆ ನ್ಯಾಯಾಂಗಕ್ಕೆ ತೊಂದರೆಯಾಗುತ್ತದೆ ಎಂದು ಅವರು ಭಾವಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಸಮಿತಿಯ ವಿಚಾರಣೆ ತಡೆಗೆ ಅವರು ನಡೆಸಿದ ಅನೇಕ ಯತ್ನಗಳು ಸಫಲವಾಗಲಿಲ್ಲ, ಸುಪ್ರೀಂಕೋರ್ಟ್ ನೇಮಿಸಿರುವ ಸಮಿತಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವುದೆಂಬ ಬಗ್ಗೆ ಅವರಿಗೆ ನಂಬಿಕೆ ಇರಲಿಲ್ಲ. ಅವರ ರಾಜೀನಾಮೆಗೆ ಇದೂ ಒಂದು ಕಾರಣ ಎಂದು ಹೇಳಿವೆ

English summary
Sikkim High Court Chief Justice P D Dinakaran on Friday (July 29) submitted his resignation to the President. The 61-year-old Dinakaran, due to retire on May 5 next year, said he had lost faith in the fairness of the procedure adopted by the inquiry committee headed by Supreme Court judge Justice Aftab Alam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X