ವೈದ್ಯ ಲೋಕದ ಪವಾಡ: ಕಲ್ಮಾಡಿಗೆ ತಲೆ ಸರಿಯಾಗೇ ಇದೆ!

ಮರೆಗುಳಿ ರೋಗ ಬಂದಿದೆ ಎಂಬ ವರದಿಗಳನ್ನು ನಿರಾಕರಿಸಿರುವ ಕಾಮನ್‌ವೆಲ್ತ್ ಗೇಮ್ಸ್ ಸಂಘಟನಾ ಸಮಿತಿಯಿಂದ ವಜಾಗೊಂಡಿರುವ ಅಧ್ಯಕ್ಷ ಸುರೇಶ್ ಕಲ್ಮಾಡಿ, 'ಅಯ್ಯೋ ದೇವರೆ, ನನ್ನ ತಲೆ ಮತ್ತು ಮಿದುಳು ಸರಿಯಯಾಗಿಯೇ ಇದೆ' ಎಂದು ತಲೆ ಮುಟ್ಟಿನೋಡಿಕೊಂಡು ಹೇಳಿದ್ದಾರೆ, (ಚಿತ್ರದಲ್ಲಿ ನೋಡಿ).
ನಮ್ಮ ದೇಶದಲ್ಲಿ ಭ್ರಷ್ಟರು ಹಾಗಿರಲಿ, ಆಸ್ಪತ್ರೆಗಳೂ ಯಾವ ಸ್ಥಿತಿಯಲ್ಲಿವೆ ಎಂಬುದಕ್ಕೆ ಇದು ತಾಜಾ ಉದಾಹರಣೆ. ಮರೆವು ಕಾಯಿಲೆ ಬಂದ ವ್ಯಕ್ತಿಗೆ ಹತ್ತೇ ದಿನಗಳಲ್ಲಿ ವಾಸಿ ಮಾಡಿಸಿದ ದಾಖಲೆ ಈ ಆಸ್ಪತ್ರೆಗಳಿಗೆ ಸಲ್ಲುಸತ್ತದೆ!
'ಕಲ್ಮಾಡಿ ನಿಜಕ್ಕೂ ಸ್ಮರಣಾ ಶಕ್ತಿ ನಾಶ ಕಾಯಿಲೆಯಿಂದ ಬಳುತ್ತಿದ್ದಾರೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳುವ ಸಲುವಾಗಿ ಅವರನ್ನು ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆಯ (ಎಐಐಎಂಎಸ್) ನರವಿಜ್ಞಾನ ವಿಭಾಗದಲ್ಲಿ ಜುಲೈ 28 ರಂದು ಪರೀಕ್ಷಿಸಲಾಯಿತು' ಎಂದು ತಿಹಾರ್ ಜೈಲಿನ ವಕ್ತಾರ ಸುನೀಲ್ ಗುಪ್ತಾ ತಿಳಿಸಿದ್ದಾರೆ.
ಸತತ ನಾಲ್ಕು ತಾಸುಗಳ ಪರೀಕ್ಷೆಯ ನಂತರ ಎಐಐಎಂಎಸ್‌ನಿಂದ ಹೊರಬಂದ ಕಲ್ಮಾಡಿ, 'ಐದು ವರ್ಷಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದೆ. ಅದನ್ನು ಬಿಟ್ಟರೆ ನನಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ನಾನು ಮಾನಸಿಕವಾಗಿ ಚೆನ್ನಾಗಿಯೇ ಇದ್ದೇನೆ' ಎಂದರು.
ಕಲ್ಮಾಡಿ ಅವರನ್ನು ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ ಇದೇ 19ರಂದು ಎಂಆರ್ ಐ ಸ್ಕ್ಯಾನ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಆಸ್ಪತ್ರೆಯು 'ಕಲ್ಮಾಡಿಗೆ ಮರೆವು ಕಾಯಿಲೆ ಇದೆ' ಎಂದು ವರದಿ ನೀಡಿತ್ತು.












Click it and Unblock the Notifications