ಬದ್ಧ ವೈರಿಗಳು ಮತ್ತೆ ಒಂದಾಗುವರೇ ಇದು ಸಾಧ್ಯವೇ?

ಅವರ ಎರಡನೇ ಪುತ್ರ ವಿಜಯೇಂದ್ರ ಜೊತೆ ಮಾಜಿ ಸಿಎಂ ಕುಮಾರಸ್ವಾಮಿ ದೆಹಲಿಯಿಂದ ಬೆಂಗಳೂರಿಗೆ ಬಂದಿಳಿದ್ದನ್ನು ಕಂಡು ಅಚ್ಚರಿಗೊಂಡ ಕೆಲವರು ತಕ್ಷಣವೇ ಮೊಬೈಲ್ ಸಂದೇಶವನ್ನು ಹರಿಯಬಿಟ್ಟಿದ್ದಾರೆ.
ಎಚ್ಡಿಕೆ ಜೊತೆ ಬಿಜೆಪಿಯ ಧರ್ಮೇಂದ್ರ ಪ್ರಧಾನ್, ಈಶ್ವರಪ್ಪ, ಶೆಟ್ಟರ್ ಮತ್ತು ಬಚ್ಚೇಗೌಡ ಜೊತೆಯಾಗಿ ಆಗಮಿಸಿದ್ದನ್ನು ಗಮನಿಸುವ ತಾಳ್ಮೆ ಇಲ್ಲದ ಕೆಲವರು ಸುಮ್ಮನೆ ಅನುಮಾನವನ್ನು ಹುಟ್ಟು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಗಣಿವರದಿಯಲ್ಲಿ ಬಂದಂತೆ ತಾನು ಆರೋಪಿಯೆಂದು ಸಾಬೀತಾದರೆ, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನನಗೆ ಅಧಿಕಾರದಲ್ಲಿ ಅಂಟಿ ಕೊಳ್ಳಬೇಕೆನ್ನುವ ಆಶಯವಿಲ್ಲ.
ಪರ್ಯಾಯ ಸರ್ಕಾರಕ್ಕೆ ಬೆಂಬಲವಿಲ್ಲ, ಸರ್ಕಾರ ಉರುಳಿಸುವ ಕೆಲಸಕ್ಕೆ ಕೈ ಹಾಕುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಆದರೆ, ಅವರ ಮುಂದಿನ ನಡೆ ಏನು ಎಂಬುದು ಇನ್ನೂ ನಿಗೂಢವಾಗಿದೆ. ಹಾವು ಮುಂಗುಸಿಯಂತೆ ಕಿತ್ತಾಡುವ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರು ಮತ್ತೆ ಒಂದಾಗುವ ಸುದ್ದಿ ಗಾಳಿಸುದ್ದಿಯಾಗೆ ಹರಿದಾಡುತ್ತಿದೆ ಅಷ್ಟೇ.












Click it and Unblock the Notifications