ಕತ್ತು ಕೊಯ್ದು ಕೃಷಿ ವಿಜ್ಞಾನಿ ಪತ್ನಿಯ ಬರ್ಬರ ಕೊಲೆ

ಕೃಷಿ ವಿಜ್ಞಾನ ಕೇಂದ್ರಕ್ಕೆ ಸೇರಿದ ವಸತಿಗೃಹದಲ್ಲಿ ಈ ಹತ್ಯೆ ನಡೆದಿದ್ದು, ಪತಿ ನಾರಾಯಣಸ್ವಾಮಿ ಕಚೇರಿಗೆ ತೆರಳಿದ ಬಳಿಕ ಪುಷ್ಪ ಒಬ್ಬರೇ ಇದ್ದ ಸಂದರ್ಭ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಕತ್ತು ಕೊಯ್ದು ಹತ್ಯೆ ಮಾಡಿರಬಹುದೆಂದು ಶಂಕಿಸಲಾಗಿದೆ.
ಎಂದಿನಂತೆ ನಾರಾಯಣಸ್ವಾಮಿಯವರು ಮಧ್ಯಾಹ್ನ ಕಚೇರಿಯಿಂದ ಊಟಕ್ಕೆಂದು ಮನೆಗೆ ಬಂದ ಸಂದರ್ಭ ಪತ್ನಿ ಪುಷ್ಪ ಹತ್ಯೆಗೀಡಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಗೋಣಿಕೊಪ್ಪಲು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮಡಿಕೇರಿಯಿಂದ ಶ್ವಾನದಳವನ್ನು ಕರೆಯಿಸಲಾಯಿತಾದರೂ ಶ್ವಾನ ಮನೆಯಿಂದ ಕಚೇರಿವರೆಗೆ ತೆರಳಿ ಹಿಂತಿರುಗಿದ್ದು ಯಾವುದೇ ಸುಳಿವು ದೊರೆತಿಲ್ಲ.
ಈ ಪ್ರಕರಣ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಹತ್ಯೆಗೀಡಾದ ಮಹಿಳೆಯ ಕಾಲಲ್ಲಿ ಹಾಕಿರುವ ಚಪ್ಪಲಿ ಹಾಗೆಯೇ ಇದ್ದು ಬಹುಶಃ ಕ್ಲೋರೊಪೋಂ ಮೂಲಕ ಪ್ರಜ್ಞೆ ತಪ್ಪಿಸಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications