ಪುತ್ತೂರು ರೈಲ್ವೇ ನಿಲ್ದಾಣ ಅಭಿವೃದ್ದಿಗೆ 2 ಕೋ.ರು.

Nalin Kumar Kateel supervising development work
ಮಂಗಳೂರು, ಜು. 26 : ಪುತ್ತೂರು ರೈಲು ನಿಲ್ದಾಣವನ್ನು ಸುಸಜ್ಜಿತವಾಗಿ ಅಭಿವೃದ್ಧಿಪಡಿಸಲು 2 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಪೈಕಿ 40 ಲಕ್ಷ ರೂ. ವೆಚ್ಚದ ಕಾಮಗಾರಿಗಳು ಈಗಾಗಲೇ ನಡೆದಿವೆ. ಪುತ್ತೂರು ರೈಲು ನಿಲ್ದಾಣವನ್ನು ಕೇಂದ್ರ ಸರಕಾರದ ಆದರ್ಶ ರೈಲು ನಿಲ್ದಾಣ ಯೋಜನೆಗೆ ಸೇರ್ಪಡೆಗೊಳಿಸಲು ಹೊಸ ಪ್ರಸ್ತಾವನೆಯೊಂದನ್ನು ಸಲ್ಲಿಸಲಾಗುವುದು ಎಂದು ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

ಅವರು ನೈಋತ್ಯ ರೈಲ್ವೇಯ ಮೈಸೂರು ವಿಭಾಗದ ಎಂಜಿನಿಯರ್‌ ಸಿ.ಎಂ. ರಂಗನಾಥ್‌ ಮತ್ತು ಇತರ ಅಧಿಕಾರಿಗಳ ಜತೆ ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದರು. ಕಬಕ ಪುತ್ತೂರು ರೈಲು ನಿಲ್ದಾಣದ ಹಾಲಿ ಪ್ಲಾಟ್‌ಫಾರಂನ್ನು ಇನ್ನೂ 270 ಮೀಟರ್‌ ವಿಸ್ತರಿಸಲಾಗುತ್ತದೆ. ಎರಡನೇ ಪ್ಲಾಟ್‌ಫಾರಂನ್ನು ಎತ್ತರಿಸಲಾಗುತ್ತದೆ. ಅಲ್ಲದೆ ಕೋಚ್‌ಗಳ ನಂಬರ್‌ ಹಾಕುವ ವ್ಯವಸ್ಥೆಯನ್ನು ಛಾವಣಿಗೆ ಅಳವಡಿಸಲಾಗುತ್ತದೆ. ಛಾವಣಿಯನ್ನು ಸಂಪೂರ್ಣ ದುರಸ್ತಿ ಪಡಿಸಲಾಗುವುದು ಎಂದು ಸಂಸದರು ಹೇಳಿದರು.

ಪುತ್ತೂರು ರೈಲು ನಿಲ್ದಾಣದ ಸಂಪರ್ಕ ರಸ್ತೆಯನ್ನು ಪುರಸಭೆಗೆ ಹಸ್ತಾಂತರಿಸುವುದು ಅಥವಾ ಪುರಸಭೆ ಮತ್ತು ರೈಲ್ವೇ ಇಲಾಖೆಯ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲು ಸಂಸದರು ರೈಲ್ವೇ ಎಂಜಿನಿಯರ್‌ಗೆ ಸೂಚನೆ ನೀಡಿದರು. ಪ್ರತಿ 3 ತಿಂಗಳಿಗೊಮ್ಮೆ ತಾನು ಪಾಲ್ಘಾಟ್, ಕೊಂಕಣ್‌ ಮತ್ತು ಮೈಸೂರು ರೈಲ್ವೇ ವಿಭಾಗದ ಅಧಿಕಾರಿಗಳ ಸಭೆ ನಡೆಸುವುದಾಗಿ ಹೇಳಿದರು.

ಅಡ್ಯಾರ್‌ನಲ್ಲಿ ರೈಲ್ವೇ ಅಂಡರ್‌ ಪಾಸ್‌, ಬಂಟ್ವಾಳದಲ್ಲಿ ಮೇಲು ಸೇತುವೆ, ನೇರಳಕಟ್ಟೆಯಲ್ಲಿ ಪ್ರಯಾಣಿಕ ದಾಟು ಮೇಲು ಸೇತುವೆ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ. ನೇರಳಕಟ್ಟೆ ಮತ್ತು ಎಡಮಂಗಲದಲ್ಲಿ ರೈಲು ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಸಂಸದರು ತಿಳಿಸಿದರು.

;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+