ಅಕ್ರಮ ಗಣಿ ವರದಿ : ಆರ್ ಎಸ್ ಎಸ್ ಅಸಂತೋಷ
ಬೆಂಗಳೂರು,
ಜುಲೈ26: ಲೋಕಾಯುಕ್ತ 'ಗಣಿಗಾರಿಕೆ' ಸಮ್ಮುಖದಲ್ಲಿ ಆಡಳಿತಾರೂಢ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದ ದೂರ ಉಳಿಯಲು ಆರ್ಎಸ್‌ಎಸ್ ತೀರ್ಮಾನಿಸಿದೆ. ಲೋಕಾಯುಕ್ತರ ಅಕ್ರಮ ಗಣಿ ತನಿಖಾ ವರದಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ನಾಲ್ವರು ಸಚಿವರ ಹೆಸರು ಪ್ರಸ್ತಾಪವಾಗಿದೆ. ಇದು ಆರ್ಎಸ್‌ಎಸ್ ಮುಖಂಡರಲ್ಲಿ ಬೇಸರ ಮೂಡಿಸಿರುವುದೇ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. id="toptextpromo">ಈ
ಹಿನ್ನೆಲೆಯಲ್ಲಿ 'ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಮ್ಮ ಪೂರ್ಣ ಬೆಂಬಲ ಇದೆ. ಈ ವಿಷಯದಲ್ಲಿ ನಮ್ಮ ಅಭಿಪ್ರಾಯಕ್ಕಾಗಿ ಕಾಯುವ ಅಗತ್ಯ ಇಲ್ಲ' ಎಂದು ಆರ್ಎಸ್‌ಎಸ್ ಮುಖಂಡರು, ಬಿಜೆಪಿ ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ದಾರೆ ಎಂದು ಗೊತ್ತಾಗಿದೆ. id='are-slot-1' class='oiad oi-axt oiadv'> id='top-searched-articles'>ಮುಖ್ಯಮಂತ್ರಿಯಾಗಿ
ಯಡಿಯೂರಪ್ಪ ಮುಂದುವರಿಯಬೇಕೇ ಅಥವಾ ಅವರನ್ನು ಬದಲಿಸಬೇಕೇ ಎನ್ನುವ ವಿಷಯ ಪಕ್ಷಕ್ಕೆ ಬಿಟ್ಟದ್ದು. ಈ ವಿಷಯದಲ್ಲಿ ಆರ್ಎಸ್‌ಎಸ್ ಮಧ್ಯಪ್ರವೇಶ ಮಾಡುವುದಿಲ್ಲ. ಪಕ್ಷ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಒಳಿತೆನಿಸಿದ್ದನ್ನು ಮಾಡಿ ಎನ್ನುವ ಸಲಹೆಯನ್ನೂ ನೀಡಿದೆ.











Click it and Unblock the Notifications