ಕುಮಾರಣ್ಣ, ಯಾರಣ್ಣಾ ಅದು ಚನ್ನಪಟ್ಟಣದ ಭಾಗ್ಯ!?

HD Kumaraswamy with wife
ಬೆಂಗಳೂರು, ಜು 26: ರೀ ಸಾಕಮ್ಮಾ, ವಿಷಯ ಗೊತ್ತಾಯ್ತೇನ್ರಿ. ಅದೇ ದೊಡ್ಡಗೌಡರ ಮಗ, ಅದೇರಿ ಮುಖ್ಯಮಂತ್ರಿ ಆಗಿದ್ನಲ್ಲಾ, ಕುಮಾರಸ್ವಾಮಿ ಅಂತ. ಇತ್ತೀಚೆಗೆ ಅಯಪ್ಪ ಚನ್ನಪಟ್ಟಣದ ಬೊಂಬೆ ಜತೆಗೂ ಆಟ ಶುರುವಿಟ್ಟುಕೊಂಡಿದ್ದಾನಂತೆ ಗೊತ್ತೇನ್ರಿ!?

ಅಯ್ಯೋ, ಹೌದೇನ್ರಿ. ನನಗೆ ಗೊತ್ತೇ ಇರಲಿಲ್ಲ. ಇಷ್ಟಕ್ಕೂ ಇದನ್ನೆಲ್ಲ ನಿಮಗೆ ಯಾರ್ರಿ ಹೇಳಿದ್ರು?

ಯಾರ್ ಹೇಳೋದ್ ಏನ್ ಬಂತು. ಅದೇ ನಮ್ 'ಕಪ್ಪು ಸುಂದರಿ' ಇದಾಳಲ್ಲ 'ಹಾಯ್ ಬೆಂಗಳೂರ್' ಅವಳೇಯಾ ಹೇಳಿದ್ದು.

ಹೌದೇನ್ರಿ ... ಇನ್ನೂ ಏನೇನ್ ಹೇಳಿದ್ಲುರಿ ಅವಳು. ನನ್ಗೂ ಒಂಚೂರು ಹೇಳಿ. ವಸಿ ಕೇಳಿಸಿಕೊಳ್ಳೋವಾ!

ಅಯ್ಯೊ ಅದೊಂದ್ ದೊಡ್ ಕಥೆ ಬುಡಿ. ಈಗಿನ ಮುಖ್ಯಮಂತ್ರಿ ಇದಾರಲ್ಲ ಯಡ್ರಪ್ಪ. ಆಯಪ್ನು - ಈ ಕುಮಾರಣ್ಣ ಇತ್ತಿತ್ಲಾಗೆ ಒಳ್ಳೆ ಹಾವು-ಮುಂಗಸಿ ಥರಾ ಆಡ್ತವ್ರೆ. ಈ ಕುಮಾರಣ್ಣನೂ ಮೊನ್ನೆ ಧಿಮ್ಮಿರಂಗ ಅಂತ ಯಡ್ರಪ್ನೋರ ವಿರುದ್ಧ ಸಿಕ್ಕಾಪಟ್ಟೆ ಎಗರಾಡ್ತಿದ್ನಂತೆ. ಅದ್ಕೆ ಇಯಪ್ಪನ ವಿಷಯ ಬಂದಾಗ ಅವಯ್ಯ ಅದೆಲ್ಲಿಂದಲೋ ನಗಾಡ್ತಾ, ಅಯ್ಯೋ ಬಿಡ್ರಿ. ಆ ಕುಮಾರನ ವಿಷಯ ಗೊತ್ತಲ್ಲ. ತಾನಿನ್ನೂ ಕುಮಾರ ಅಂತ್ಲೇ ಅಂದ್ಕೊಂಡಿದ್ದಾನೆ. ಅವಯ್ಯನದು ಬರೀ ಎರಡೇ ಕೇಸ್ ಅಲ್ಲ. ಏನಂತ ಹೇಳ್ಲಿ ಆತನ ಸೌಭಾಗ್ಯವನ್ನು. ಚನ್ನಪಟ್ಟಣದಲ್ಲಿ 'ಬೊಂಬೆ ಭಾಗ್ಯ' ಆಟ ಶುರುವಿಟ್ಟುಕೊಂಡಿದ್ದಾನಂತೆ ಎಂದು ಹೇಳುತ್ತಲೇ ಸೋಫಾಗೆ ಆನಿಕೊಂಡಿದ್ದ ಶೋಭಕ್ಕ ಮುಸಿಮುಸಿ ನಗ್ತಾ, ಒಳಮನೆಗೆ ಛಂಗನೆ ಹಾರಿದ್ಲಂತೆ.

ಅಯ್ಯೋ ಬಿಡ್ರಿ. ಅವರು ಎಲ್ಲಾದ್ರೂ ಬುಗುರಿ ಆಡಿಸಲಿ. ನಮಗ್ಯಾಕೆ ದೊಡ್ಡೋರ್ ವಿಷ್ಯಾ. ಎತ್ತಾಗಾದ್ರೂ ಹೋಗ್ಲಿ ಬಡೆತ್ತುಗಳು ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+