ಎಚ್ಚರ! ಸದ್ದಿಲ್ಲದೇ ಏರಿದೆ ಮೊಬೈಲ್ ಕರೆ ದರ

ಆದರೆ ಕರ್ನಾಟಕದ ಗ್ರಾಹಕರಿಗೆ ಸದ್ಯಕ್ಕೆ ಇದರ ಬಿಸಿ ತಟ್ಟಿಲ್ಲ. ಅಂದರೆ ರಾಜ್ಯದಲ್ಲಿ ಮೊಬೈಲ್ ಕಾಲ್ ರೇಟ್ ಇನ್ನೂ ಹೆಚ್ಚಳವಾಗಿಲ್ಲ.
ಮುಖ್ಯವಾಗಿ ಚಿಕ್ಕ ಪ್ರಮಾಣದ ಮೊಬೈಲ್ ಸೇವಾ ಕಂಪನಿಗಳು ಕರೆ ದರಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ. ಈ ಕಂಪನಿಗಳು ಕಳೆದ ನಾಲ್ಕೈದು ವರ್ಷಗಳಿಂದ ನಷ್ಟದಲ್ಲಿವೆ. ದೊಡ್ಡ ಕಂಪನಿಗಳ ಅಗ್ಗದ ಕರೆ ದರಗಳಿಂದ ಸಣ್ಣ ಪ್ರಮಾಣದ ಕಂಪನಿಗಳಿಗೆ ನಷ್ಟವಾಗಿತ್ತಿತ್ತು. ಏರ್ ಟೆಲ್ ದರ ಏರಿಕೆ ನಿರ್ಧಾರ ಚಿಕ್ಕ ಕಂಪನಿಗಳಿಗೆ ಸಮಾಧಾನ ತಂದಿದೆ. ಆದರೆ ಗ್ರಾಹಕರಿಗೆ ತೀವ್ರ ಅಸಮಾಧಾನವಾಗಿದೆ.
ಕಳೆದ ಶುಕ್ರವಾರ ಏರ್ ಟೆಲ್ ದೆಹಲಿ, ಆಂಧ್ರಪ್ರದೇಶ, ಕೇರಳ, ರಾಜಸ್ತಾನ, ಮಧ್ಯಪ್ರದೇಶ ಮತ್ತು ಗುಜರಾತ್ ದೂರವಾಣಿ ವೃತ್ತಗಳಲ್ಲಿ ಕರೆ ದರಗಳನ್ನು ಶೇ 20ರಿಂದ 25ರಷ್ಟು ಹೆಚ್ಚಿಸಿತ್ತು. ಮೂರನೆಯ ತಲೆಮಾರಿನ ತರಂಗಾಂತರ ಸೇವೆ (3ಜಿ) ಮತ್ತು ಬ್ರಾಡ್‌ಬ್ಯಾಂಡ್ ನಿಸ್ತಂತು ಸಂಪರ್ಕಕ್ಕಾಗಿ ಕಂಪನಿ ಹೆಚ್ಚಿನ ಮೊತ್ತ ಪಾವತಿಸಿದೆ. ಈ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯ ಎಂದು ಏರ್ ಟೆಲ್ ಪ್ರತಿಕ್ರಿಯಿಸಿದೆ.
ದೂರವಾಣಿ ಕಂಪನಿಗಳ ನಡುವೆ ದರ ಸಮರ ಮೊದಲಿನಿಂದಲೂ ಇದೆ. ಈಗ ಏರ್ ಟೆಲ್ ಇದಕ್ಕೆ ಹೊಸ ಮುನ್ನುಡಿ ಬರೆದಿದೆ. ಮುಂಬರುವ ದಿನಗಳಲ್ಲಿ ಉಳಿದ ಕಂಪನಿಗಳೂ ಕರೆ ದರ ಹೆಚ್ಚಿಸಬಹುದು ಎಂದು ರಿಲಯನ್ಸ್ ಕಮ್ಯುನಿಕೇಷನ್ಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮೌಲ್ಯವರ್ಧಿತ ಸೇವೆಗಳ ಮೂಲಕ ಕಂಪನಿಗಳಿಗೆ ಸರಾಸರಿ ವರಮಾನ ಲಭಿಸುತ್ತಿಲ್ಲ. ಕರೆಗಳ ದರ ಏರಿಕೆಗೆ ಇದೇ ಮುಖ್ಯ ಕಾರಣ ಎನ್ನಲಾಗಿದೆ.
;











Click it and Unblock the Notifications