ಯಡಿಯೂರಪ್ಪ ಅವರೇ ಸಿಎಂ, 20 ಕೋಟಿ ಬೆಟ್ಸ್

ಕ್ರೀಡೆಗಳಿಗೆ ಸೀಮಿತವಾಗಿದ್ದ ಬೆಟ್ಟಿಂಗ್ ಮಾಫಿಯಾ ಈಗ ರಾಜಕೀಯ ವಲಯದಲ್ಲೂ ಹಬ್ಬುತ್ತಿದೆ. ಚುನಾವಣೆ ಸಮಯದಲ್ಲಿ ಚುರುಕಾಗಿದ್ದ ಬುಕ್ಕಿಗಳು ಈಗ ಕರ್ನಾಟಕ ರಾಜ್ಯ ಸಿಂಹಾಸನಾಧೀಶನ ಪಟ್ಟಕ್ಕೆ ಬೆಲೆ ಕಟ್ಟತೊಡಗಿದ್ದಾರೆ.
ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿ ಸೋರಿಕೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಿಎಂ ಪಟ್ಟದ ಅಳಿವು-ಉಳಿವಿನ ಪ್ರಶ್ನೆ ಎದ್ದಿತ್ತು. ಆದರೆ, ಗಡ್ಕರಿ ಪತ್ರ ಬರೆದಿರುವ ಯಡಿಯೂರಪ್ಪ, ವರದಿ ಆಧಾರಿಸಿ ಸಮಿತಿ ತನಿಖೆ ನಡೆಸಲಿ, ನಾನು ರಾಜೀನಾಮೆ ನೀಡುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ರಾಜಕೀಯ ಬಿಕ್ಕಟ್ಟನ್ನು ಸರಿಯಾಗಿ ಬಳಸಿಕೊಳ್ಳುತ್ತಿರುವ ಬುಕ್ಕಿಗಳು, ಯಡಿಯೂರಪ್ಪ ಪರ ಮತ್ತು ವಿರೋಧ ಬೆಟ್ಟಿಂಗ್ ನಲ್ಲಿ ಮುಳುಗಿದ್ದಾರೆ. ಯಡಿಯೂರಪ್ಪ ಪರವಾಗಿ 3-1 ಬೆಟ್ ನಡೆಯುತ್ತಿದೆ. ವಿರೋಧಗಳು 5-1ರಂತೆ ಬೆಟ್ ಕಟ್ಟುತ್ತಿದ್ದಾರೆ. ಪರ್ಯಾಯ ನಾಯಕತ್ವದ ವಿಷಯದಲ್ಲಿ 10-1 ಅನುಪಾತದಲ್ಲಿ ಬೆಟ್ ಸಾಗಿದೆ.
ಉಳಿದಂತೆ ನ್ಯಾಯಮೂರ್ತಿ ಹೆಗ್ಡೆ ವರದಿ ಯಾವಾಗ ಸಲ್ಲಿಸುತ್ತಾರೆ ಎನ್ನುವುದರ ಮೇಲೆ 2-1 ಅನುಪಾತದಲ್ಲಿ ಬೆಟ್ ನಡೆಯುತ್ತಿವೆ. ಬುಕ್ಕಿಗಳ ಪ್ರಕಾರ, ಸುಮಾರು 20 ಕೋಟಿಗಳಿಗೂ ಅಧಿಕ ಮೊತ್ತದ ಬೆಟ್ಟಿಂಗ್ ನಡೆದಿದೆ. ಸುಮಾರು 50 ಕೋಟಿ ರು ತನಕ ಬೆಟ್ಟಿಂಗ್ ನಡೆಯುವ ನಿರೀಕ್ಷೆಯಿದೆ ಎಂದು ಡಿಎನ್ ಎ ಪತ್ರಿಕೆ ವರದಿ ಮಾಡಿದೆ.












Click it and Unblock the Notifications