ಚರ್ಚ್ ದಾಳಿ ಕೇಸು ಹಿಂದಕ್ಕೆ ಪಡೆಯಲು ಮನವಿ
ಮಂಗಳೂರು,
ಜು. 23 : ಮಂಗಳೂರು ಬಿಷಪ್ ನೇತೃತ್ವದ ನಿಯೋಗ ಮಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ ಸಿಂಗ್ ಅವರನ್ನು ಶುಕ್ರವಾರ ಭೇಟಿ ಮಾಡಿ 2008 ಚರ್ಚ್ ದಾಳಿಗೆ ಸಂಬಂಧಪಟ್ಟ ಕೇಸುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸುವ ಮನವಿ ಅರ್ಪಿಸಿತು. id="toptextpromo">ರಾಜ್ಯ
ಸರ್ಕಾರ ಈಗಾಗಲೇ ಚರ್ಚ್ ಮೇಲಿನ ದಾಳಿ ಘಟನೆಗಳ ಕೇಸುಗಳನ್ನು ಹಿಂದಕ್ಕೆ ಪಡೆಯುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಣೆ ಮಾಡಿದ ಮೇಲೂ ಈ ಕೇಸುಗಳಿಗೆ ಸಂಬಂಧಪಟ್ಟು ಸಮನ್ಸಗಳು ಜಾರಿಯಾಗುತ್ತಿರುವ ಬಗ್ಗೆ ನಿಯೋಗ ಕಮಿಷನರ್ ಗಮನ ಸೆಳೆಯಿತು. id='are-slot-1' class='oiad oi-axt oiadv'> id='top-searched-articles'>ನಂತರ
ಮಾತನಾಡಿದ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಮುಖ್ಯಮಂತ್ರಿಗಳು ನಾಲ್ಕು ತಿಂಗಳುಗಳ ಹಿಂದೆಯೇ ಕೇಸುಗಳನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿದ್ದರೂ ಅದು ಅನುಷ್ಠಾನವಾಗಿಲ್ಲವೆಂದು ವಿಷಾದಿಸಿದರು. ಈ ನಿಯೋಗದಲ್ಲಿ ಫಾ.ಥೋಮಸ್ ಡಿಸಿಲ್ವಾ, ಫಾ.ಜೆ.ಬಿ.ಕ್ರಾಸ್ತಾ,, ಐವನ್ ಡಿಸೋಜಾ ಸಹಿತ ಪ್ರಮುಖರಿದ್ದರು.











Click it and Unblock the Notifications