ಡಿಎನ್‌ಎ ಒಲ್ಲೆ ಎನ್ನುವ 'ಪಿತಾಮಹ' ತಿವಾರಿಗೆ ಏನ್ ಮಾಡೋದು!?

'ಸಾರ್ವಜನಿಕ ಬದುಕಿನಲ್ಲಿ ನಾನು ನಿಷ್ಕಳಂಕ ವ್ಯಕ್ತಿತ್ವ ಹೊಂದಿದ್ದೇನೆ. ಇಂಥ ಸುಳ್ಳು ಮೊಕದ್ದಮೆ ಹೂಡುವ ಮೂಲಕ ಅರ್ಜಿದಾರ ನನ್ನ ವರ್ಚಸ್ಸಿಗೆ ಧಕ್ಕೆಯುಂಟು ಮಾಡುತ್ತಿದ್ದಾನೆ' ಎಂದು ತಿವಾರಿ ಪ್ರಮಾಣಪತ್ರದಲ್ಲಿ ಹೇಳಿದ್ದಾರೆ.
ಹಳೆಯದೆಲ್ಲ ಬಿಟ್ಹಾಕಿ, ಆಂಧ್ರ ರಾಜಭವನದಲ್ಲಿ ಈತ ನಡೆಸಿದ ರಾಸಲೀಲೆ ಜನರಿಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಆದರೂ ಈ ಪಿತಾಮಹ ನಾನು ಸರ್ವ ಸಾಚಾ ಎನ್ನುತ್ತಿದ್ದಾನಲ್ಲ! ಜನಕ್ಕೆ ಎಲ್ಲಿಂದ ನಗಬೇಕೋ ತಿಳಿಯದಾಗಿದೆ.
'ನನ್ನ ಆತ್ಮಗೌರವ ಉಳಿಸಿಕೊಳ್ಳುವ ಸಲುವಾಗಿ ಮತ್ತು ಒಬ್ಬ ಹಿರಿಯ ನಾಗರಿಕನಾಗಿ ಡಿಎನ್‌ಎ ಪರೀಕ್ಷೆಗೆ ರಕ್ತದ ಮಾದರಿ ಕೊಡಲು ತಯಾರಿಲ್ಲ. ನಾನು 70 ವರ್ಷಗಳಿಂದಲೂ ರಾಜಕೀಯದಲ್ಲಿದ್ದೇನೆ. ಎಂದೂ ನನ್ನ ಮೇಲೆ ಯಾವ ರೀತಿಯ ಆರೋಪಗಳೂ ಕೇಳಿಬಂದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. 31 ವರ್ಷದ ರೋಹಿತ್ ಶೇಖರ್ ಎಂಬುವವರು ತಾವು ತಿವಾರಿ ಅವರ ಮಗ ಎಂದು ಹೇಳಿಕೊಂಡು ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಪ್ರಕರಣ ಇದಾಗಿದೆ.












Click it and Unblock the Notifications