ಮಾನ್ಯ ಲೋಕಾಯುಕ್ತರೇ ಉತ್ತರ ಹೇಳಿ, ತಪ್ಪಿಸಿಕೊಳ್ಬೇಡಿ

Question to Lokayukta
ಬೆಂಗಳೂರು ಜು 21: ಅಕ್ರಮ ಗಣಿಗಾರಿಕೆ ಕುರಿತ ವರದಿ ಲೀಕ್ ಆಗಿರುವುದರಿಂದ ಯಾವುದೇ ತೊಂದರೆ ಇಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಲೀಕ್ ಆಗಲು ಫೋನ್ ಟ್ಯಾಪ್ ಕಾರಣ ಎಂದು ಲೋಕಾಯುಕ್ತ ಹೇಳುತ್ತಿದ್ದಾರೆ. ಯಾಕೋ ಸಂತೋಷ್ ಹೆಗ್ಡೆ ನಡೆ ಅನುಮಾನಕ್ಕೆ ಎಡೆ ಮಾಡುತ್ತಿದೆ.

ಲೋಕಾಯುಕ್ತರು ಈಗ ನಾಳೆ ವರದಿ ಸಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಅವಧಿ ಮುನ್ನ ವರದಿ ಸೋರಿಕೆ ಹೊಣೆ ಹೊತ್ತಿರುವ ಲೋಕಾಯುಕ್ತರು ರಾಜೀನಾಮೆ ನೀಡುತ್ತಾರೋ ಇಲ್ಲವೋ ಸ್ಪಷ್ಟವಾಗಿಲ್ಲ. ಅಗಸ್ಟ್ 2 ಕ್ಕೂ ಈ ಕೆಳಗಿನ ಕೆಲ ಪ್ರಶ್ನೆಗಳಿಗೆ ಉತ್ತರಿಸಿ. [ಗಣಿಗಾರಿಕೆ ಸ್ಫೋಟ : ಕ್ಷಣಕ್ಷಣದ ಸುದ್ದಿ]

* ಸುಮಾರು 8000 ಪುಟಗಳ ವರದಿಯಲ್ಲಿ ಕೆಲ ಭಾಗ ಮಾತ್ರ ಸೋರಿಕೆಯಾಗಿದ್ದಾರರು ಹೇಗೆ?
* ಫೋನ್, ಮೊಬೈಲ್ ಟ್ಯಾಪ್ ಬಗ್ಗೆ 2-3 ತಿಂಗಳಿನಿಂದ ಅನುಮಾನವಿತ್ತು ಎನ್ನುವುದಾದರೆ ಏಕೆ ಪೊಲೀಸರಿಗೆ ದೂರು ನೀಡಿಲ್ಲ?
* ಧನಂಜಯ್ ಕುಮಾರ್, ವಿಎಸ್ ಆಚಾರ್ಯ ಭೇಟಿಯನ್ನು ಏಳೆಂಟು ತಿಂಗಳ ನಂತರ ಹೇಳುವ ಅಗತ್ಯ ಏನಿತ್ತು?
* ವರದಿ ಸೋರಿಕೆಗೆ ಲೋಕಾಯುಕ್ತ ಕಚೇರಿ ಸಿಬ್ಬಂದಿ ಕಾರಣವಲ್ಲ ಎನ್ನುವುದಾದರೆ, ಸರ್ಕಾರವೇ ಲೀಕ್ ಮಾಡಲು ಮುಂದಾಗಿತ್ತೇ?
* ವರದಿ ಸೋರಿಕೆ ಬಗ್ಗೆ ಸಿಬಿಐ ತನಿಖೆ ನಡೆಸಲು ನಿಮ್ಮ ಒಪ್ಪಿಗೆ ಇದೆಯೇ?
* ನಿಮ್ಮ ವರದಿ ಇಷ್ಟು ತಡವಾಗಿ ಸಲ್ಲಿಸುತ್ತಿರುವ ಉದ್ದೇಶ ಅಥವಾ ಕಾರಣವೇನು?
* ಬಿಜೆಪಿ ಹೈಕಮಾಂಡ್ ಬಗ್ಗೆ ಈ ವರದಿಯಲ್ಲಿ ಏನಿದೆ? ಅಡ್ವಾಣಿ ಪ್ರಭಾವ ಬೀರಿದ್ದಾರೆಯೇ?
* ಜನ ಲೋಕಪಾಲ್ ವಿಧೇಯಕದ ಆಯೋಗಕ್ಕೆ ನಿಮ್ಮ ಸೇರ್ಪಡೆಯಿಂದ ಕೇಂದ್ರ ನಿಮ್ಮ ಮೇಲೆ ಒತ್ತಡ ಹೇರುತ್ತಿದೆಯೇ?

ಓದುಗರೇ, ನಿಮ್ಮ ಮನಸ್ಸಿನಲ್ಲೂ ಪ್ರಶ್ನೆಗಳ ಅಲೆಗಳು ಏಳುತ್ತಿದ್ದಾರೆ. ನಮಗೆ ಕಳಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+