ಗಳಗಳನೆ ಅತ್ತ ಸಂತೋಷ್ ಹೆಗ್ಡೆ; ಶುಕ್ರವಾರವೇ ವರದಿ ಸಲ್ಲಿಕೆ

ದೂರವಾಣಿ ಕದ್ದಾಲಿಕೆ (ಟೆಲಿಫೋನ್ ಟ್ಯಾಪಿಂಗ್) ಮೂಲಕ ಅಕ್ರಮ ಗಣಿಗಾರಿಕೆ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವ ಮುನ್ನವೇ ಸೋರಿಕೆಯಾಗಿರುವುದರಿಂದ ಕಂಗೆಟ್ಟಿರುವ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಶುಕ್ರವಾರವೇ (ಜುಲೈ22) ಸರಕಾರಕ್ಕೆ ವರದಿ ಸಲ್ಲಿಸಿ ಕೈತೊಳೆದುಕೊಳ್ಳುವುದಾಗಿ ಹೇಳಿದ್ದಾರೆ.
ನ್ಯಾ. ಹೆಗ್ಡೆ ಅವರು ತಮ್ಮ ಸದಾಶಿವನಗರ ಮನೆಯಲ್ಲಿ ಗುರುವಾರ ಬೆಳಗ್ಗೆ 9 ಗಂಟೆಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಒಂದು ಹಂತದಲ್ಲಿ ಗಳಗಳನೆ ಅತ್ತೂಬಿಟ್ಟರು. ವ್ಯಾಕುಲ, ದುಗುಡ ತುಂಬಿದ ಮನಸಿನಿಂದಲೇ ಸುದ್ದಿಗಾರರ ಮೊನಚಾದ ಪ್ರಶ್ನೆಗಳಿಗೆ ಕುಗ್ಗಿದ ದನಿಯಲ್ಲಿ ಉತ್ತರಿಸಿದರು.
ಈ ಹಿಂದೆ, ಶನಿವಾರ ಅಂದರೆ ಜುಲೈ 23ರಂದು ಸರಕಾರಕ್ಕೆ ವರದಿ ಸಲ್ಲಿಸಲು ಮಹೂರ್ತ ನಿಗದಿಪಡಿಸಿದ್ದರು. ವರದಿ ಸೋರಿಕೆಯಿಂದ ಅದರ ಮಹತ್ವಕ್ಕೆ ಕುಂದಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರ ವರದಿ ತಿರಸ್ಕರಿಸುವ ಸಾಧ್ಯತೆ ಇಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ವರದಿ ಸೋರಿಕೆಯನ್ನೇ ನೆಪವಾಗಿಟ್ಟುಕೊಂಡು ಸರಕಾರ ತಮ್ಮ ರಾಜೀನಾಮೆ ಕೇಳಿದರೆ ರಾಜೀನಾಮೆ ಒಗಾಯಿಸಿ ಹೊರಟುಹೋಗುತ್ತೇನೆ. ನನ್ನ ಸೇವಾವಧಿಗೆ ಇನ್ನು 10 ದಿನಗಳಷ್ಟೇ ಬಾಕಿಯಿದೆ. ವರದಿಯಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಸಾಕಷ್ಟು ಸ್ಪಷ್ಟ ದಾಖಲೆಗಳನ್ನು ಒದಗಿಸಿದ್ದೇನೆ ಎಂದು ನ್ಯಾ. ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಬೆಳಗ್ಗೆ 9 ಗಂಟೆಯಲ್ಲಿ ಹೇಳಿಕೊಂಡಿದ್ದಾರೆ.
;











Click it and Unblock the Notifications