ಗಣಿ ವರದಿಯಲ್ಲಿ ಶಿಡ್ಲಘಟ್ಟ ಮುನಿಯಪ್ಪ ಹೆಸರೂ ದಾಖಲು
ಬೆಂಗಳೂರು,
ಜುಲೈ21: ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗಣಿ ಸಚಿವರಾಗಿದ್ದ ವಿ. ಮುನಿಯಪ್ಪ ಅವರ ಹೆಸರು ಈ ಬಾರಿಯೂ ವರದಿಯಲ್ಲಿದೆ. ದೊಡ್ಡ ಪ್ರಮಾಣದ ಅರಣ್ಯ ಪ್ರದೇಶವನ್ನು ಗಣಿಗಾರಿಕೆಗೆ ಮುಕ್ತಗೊಳಿಸಿದ ಆರೋಪ ಇವರ ಮೇಲಿದೆ. id="toptextpromo">ಅಕ್ರಮ
ಗಣಿಗಾರಿಕೆಯ ಜೊತೆ ರಾಜ್ಯದ ವಿವಿಧ ದರ್ಜೆಯ 600ಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿರುವುದನ್ನು ಲೋಕಾಯುಕ್ತ ತನಿಖಾ ತಂಡ ಪತ್ತೆಹಚ್ಚಿದೆ. ಈ ಪೈಕಿ 10ಕ್ಕೂ ಹೆಚ್ಚು ಮಂದಿ ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳು. ಅಚ್ಚರಿಯ ಸಂಗತಿ ಎಂದರೆ ಲೋಕಾಯುಕ್ತರು ನೀಡಿರುವ ಆರೋಪಿ ಅಧಿಕಾರಿಗಳ ಪಟ್ಟಿಯಲ್ಲಿ ಕೆಲ ಲೋಕಾಯುಕ್ತ ಪೊಲೀಸರ ಹೆಸರುಗಳೂ ಇವೆ. id='are-slot-1' class='oiad oi-axt oiadv'> id='top-searched-articles'>ಬಳ್ಳಾರಿ
ಲೋಕಾಯುಕ್ತ ಎಸ್‌ಪಿ ಅಶೋಕ್ ಸದಲಗಿ, ರಾಯಚೂರು ಲೋಕಾಯುಕ್ತ ಎಸ್‌ಪಿ ಬಿ.ಮಹಾಂತೇಶ್ ಸೇರಿದಂತೆ ಬೆಳಗಾವಿ ಮತ್ತಿತರ ಜಿಲ್ಲೆಗಳ ಹತ್ತಕ್ಕೂ ಹೆಚ್ಚು ಲೋಕಾಯುಕ್ತ ಪೊಲೀಸರು ಗಣಿ ಉದ್ಯಮಿಗಳಿಂದ ಲಂಚ ಪಡೆಯುತ್ತಿದ್ದರು ಎಂಬುದು ವರದಿಯಲ್ಲಿದೆ.











Click it and Unblock the Notifications