ಮುಂಬೈ ಮುಖಾಂತರ ಮಾರಿಷಸ್ ಗೆ ಗಾಲಿ ರೆಡ್ಡಿ?
ಬೆಂಗಳೂರು,
ಜು. 21 : ಟೆಲಿಫೋನ್ ಟ್ಯಾಪಿಂಗ್ ಮೂಲಕ ಅಕ್ರಮ ಗಣಿಗಾರಿಕೆ ವರದಿ ಸೋರಿಕೆಯಾಗಿದೆ ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಅಕ್ರಮ ಗಣಿಗಾರಿಕೆಯ ಮಹಾರಾಜ ಎಂದೇ ಬಿಂಬಿತವಾಗಿರುವ ಬಳ್ಳಾರಿ ಧಣಿ ಜೆ. ಜನಾರ್ದನ ರೆಡ್ಡಿ ಮೊದಲು ಮಾಡಿದ ಕೆಲಸವೆಂದರೆ ಮಾರಿಷಸ್ ನಲ್ಲಿರುವ ಯಜಮಾನ್ ಯಡಿಯೂರಪ್ಪ ಅವರಿಗೆ ಫೋನ್ ಮಾಡಿದ್ದು. id="toptextpromo">'ಅಲ್ರಿ,
ನಮ್ಮ ಫೋನೂ ಟ್ಯಾಪ್ ಆಗುತ್ತಿದೆ. ಮೊದಲು ಫೋನ್ ಇಟ್ಟುಬಿಡಿ' ಎಂದು ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹಾವು ತುಳಿದವರಂತೆ ಬೆಚ್ಚಿಬಿದ್ದಿದ್ದಾರೆ. ವರದಿ ಸೋರಿಕೆಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಬಗ್ಗೆ ಜನಾರ್ದನ ರೆಡ್ಡಿ ತಲೆ ಓಡಿಸಿದ್ದು, ಬಿಸಿನೆಸ್ ಟ್ರಿಪ್ ಮೇಲೆ ಗುರುವಾರ ಬೆಳಗ್ಗೆ 8.30ಕ್ಕೆ ದೇವನಹಳ್ಳಿ ವಿಮಾನ ನಿಲ್ದಾಣದಿಂದ ಮುಂಬೈಗೆ ಹಾರಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮುಂಬೈಯಿಂದ
ಮಾರಿಷಸ್ ಗೆ ಹಾರಿ ಇತ್ತೀಚಿನ ಬೆಳವಣಿಗೆಗಳ ಕುರಿತ ಯಡಿಯೂರಪ್ಪ ಅವರೊಂದಿಗೆ ಮಂತ್ರಾಲೋಚನೆ ಮಾಡುವ ಸಾಧ್ಯತೆಗಳಿವೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.











Click it and Unblock the Notifications