ಹೈದರಾಬಾದ್‌ನಲ್ಲಿ ಜಗಮಗಿಸಲಿದೆ 'ಜಗನ್ ಮೋಹನ್' ಪ್ಯಾಲೆಸ್

Y.S. Jagan's massive palace in Yelahanka Bangalore
ಹೈದರಾಬಾದ್, ಜುಲೈ20 : ಈಗಾಗಲೇ ಬೆಂಗಳೂರಿನಲ್ಲಿ 200 ಕೋಟಿ ರೂಪಾಯಿ ಬೆಲೆ ಬಾಳುವ ಭವ್ಯ ಬಂಗಲೆಯನ್ನು ನಿರ್ಮಿಸಿರುವ ಆಂಧ್ರ ಪ್ರದೇಶದ ಯುವ ರಾಜಕಾರಣಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ವೈ.ಎಸ್. ಜಗನ್‌ಮೋಹನ ರೆಡ್ಡಿ ಹೈದರಾಬಾದ್‌ನಲ್ಲಿ ಇದೀಗ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಮತ್ತೊಂದು ಕನಸಿನ ಅರಮನೆ ನಿರ್ಮಿಸುತ್ತಿದ್ದಾರೆ.

ಬೆಂಗಳೂರಿನ ಯಲಹಂಕ ರಸ್ತೆಯಲ್ಲಿ ಜಗನ್‌ಗೆ ಸೇರಿದ 200 ಕೋಟಿ ರೂಪಾಯಿ ವೆಚ್ಚದ ಶ್ವೇತಭವನ ಮಾದರಿಯ ಬಂಗಲೆ ಇದೆ. ಇದರಲ್ಲಿ ಹೆಲಿಪ್ಯಾಡ್ ಮತ್ತು 40 ಕೋಣೆಗಳಿವೆ. (ಪಕ್ಕದ ಚಿತ್ರ)

14 ಎಸ್ಕಲೇಟರ್ಸ್‌, 10 ಲಿಫ್ಟ್, 200 ಆಸನದ ಥಿಯೇಟರ್, ಗ್ರಂಥಾಲಯ, ಟೆನಿಸ್ ಮತ್ತು ವಾಲಿಬಾಲ್ ಮೈದಾನ, ವ್ಯಾಯಾಮ ಶಾಲೆ, ಒಟ್ಟು 60 ಕೋಣೆ, 30 ಮಲಗುವ ಕೋಣೆ, ಎಲ್ಲೆಡೆ ಅಮೃತಶಿಲೆಯ ನೆಲಹಾಸು... ಇವೆಲ್ಲವೂ ಜಗನ್ ವೈಭವೋಪೇತ ಅರಮನೆಯ ವರ್ಣನೆ.

ನಿರ್ಮಾಣದ ಕೊನೆಯ ಹಂತದಲ್ಲಿರುವ ಹೊಸ ಮನೆ ಪೂರ್ಣಗೊಂಡಲ್ಲಿ ತಮ್ಮ ಭಾಗ್ಯದ ಬಾಗಿಲು ತೆರೆಯಲಿದೆ ಎಂಬುದು ಜಗನ್ ನಂಬುಗೆ. ಈ ಮನೆಯನ್ನು ಪ್ರವೇಶಿಸಿದ ನಂತರ ರಾಜಕಾರಣದಲ್ಲಿ ತಮ್ಮ ಅದೃಷ್ಟ ಖುಲಾಯಿಸಲಿದೆ, ಮತ್ತಷ್ಟು ಕಾಂಗ್ರೆಸ್ ಶಾಸಕರು, ಸಂಸದರು ತಮ್ಮ ಪಕ್ಷ ಸೇರಬಹುದು ಎನ್ನುವ ನಿರೀಕ್ಷೆ ಅವರಿಗಿದೆ ಎಂದು ಹೇಳಲಾಗಿದೆ.

ಇದಕ್ಕಾಗಿ ಅವರು ಪ್ರತಿಷ್ಠಿತ ಬಂಜಾರಾ ಹಿಲ್ಸ್‌ನಲ್ಲಿ ಹೈದರಾಬಾದ್ ಅಭಿವೃದ್ಧಿ ಪ್ರಾಧಿಕಾರದ (ಹುಡಾ) ಆರು ನಿವೇಶನಗಳನ್ನು ಖರೀದಿಸಿದ್ದಾರೆ. ಸುಮಾರು ಒಂದು ಎಕರೆಗೂ ಹೆಚ್ಚು ಪ್ರದೇಶದಲ್ಲಿ 90 ಸಾವಿರ ಚದರ ಅಡಿಯಲ್ಲಿ ಬಂಗಲೆ ನಿರ್ಮಿಸಲಾಗುತ್ತಿದೆ. ಸಮೀಪದಲ್ಲಿಯೇ ತಾವರೆ ಕೊಳ ಇರುವ ಕಾರಣ ಮನೆಗೆ ಲೋಟಸ್ ಮಹಲ್ ಎಂದು ಹೆಸರಿಟ್ಟಿದ್ದಾರೆ.

'ಬೇರೆ ವ್ಯಕ್ತಿಗಳಿಗೆ ಸೇರಿದ ಈ ಎಲ್ಲ ಆರು ನಿವೇಶನಗಳನ್ನೂ ಜಗನ್ ಅವರ ಕಂಪೆನಿಗಳು ಅವರಿಂದ ಕೊಂಡುಕೊಂಡಿವೆ' ಎನ್ನಲಾಗಿದೆ. ಎರಡು ದಿನಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದ ಸಿಬಿಐ ಅಧಿಕಾರಿಗಳು ನಿವೇಶನಗಳ ಅಳತೆ, ನಿರ್ಮಾಣ ವೆಚ್ಚ ಮತ್ತು ಸದ್ಯದ ಮಾರುಕಟ್ಟೆ ಬೆಲೆಗಳ ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಟ್ಟು ಜಾಗದಲ್ಲಿ ಮುಕ್ಕಾಲು ಪಾಲು ಜಗನ್‌ಗೆ ಸೇರಿದ್ದರೆ, ಉಳಿದ ಸ್ವಲ್ಪ ಭಾಗ ಅವರ ಸಹೋದರಿ ಶರ್ಮಿಳಾ ರೆಡ್ಡಿ ಅವರಿಗೆ ಸೇರಿದೆ.

ಗೃಹ ಕಚೇರಿಯ ಹೊರತಾಗಿ 20 ಮನೆಗೆಲಸದವರು ವಾಸಿಸಲು ಹಿಂದೆ ಎರಡಂತಸ್ತಿನ ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ರಾಜಸ್ತಾನದಿಂದ ಅಮೃತಶಿಲೆಯನ್ನು ಪೂರೈಸುತ್ತಿರುವ ಗುತ್ತಿಗೆದಾರರೊಬ್ಬರು ತಿಳಿಸಿದ್ದಾರೆ.

ನಿವೇಶನ ಹಾಗೂ ನಿರ್ಮಾಣ ವೆಚ್ಚ ಸೇರಿ ಲೋಟಸ್ ಮಹಲ್‌ಗೆ ನೂರು ಕೋಟಿ ರೂಪಾಯಿ ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ. ಆದರೆ, ವಾಸ್ತವವೇ ಬೇರೆ. ಸದ್ಯದ ಮಾರುಕಟ್ಟೆ ಬೆಲೆಯ ಲೆಕ್ಕಾಚಾರದ ಪ್ರಕಾರ ಈಗಿನ ಅಂದಾಜು ವೆಚ್ಚದ ಏಳು ಪಟ್ಟು ಇದಕ್ಕೆ ತಗುಲಬಹುದು. ಏನಿಲ್ಲವೆಂದರೂ 300 ಕೋಟಿ ರೂಪಾಯಿಗಿಂತ ಕಡಿಮೆ ಖರ್ಚಿನಲ್ಲಿ ಈ ಬಂಗಲೆ ನಿರ್ಮಾಣ ಅಸಾಧ್ಯ ಎನ್ನಲಾಗುತ್ತಿದೆ.

ಎಲ್ಲವೂ ಲೆಕ್ಕಾಚಾರದಂತೆ ನಡೆದಿದ್ದರೆ ಈಗಾಗಲೇ ಮನೆ ಪೂರ್ಣಗೊಳ್ಳಬೇಕಿತ್ತು. ಆದರೆ, ಜಗನ್ ಬಿಡುವಿಲ್ಲದ ರಾಜಕೀಯ ಚಟುವಟಿಕೆ, ಓಡಾಟ, ಸಾಂತ್ವನ ಯಾತ್ರೆಯಿಂದಾಗಿ ನಿರ್ಮಾಣ ಕಾರ್ಯ ವಿಳಂಬವಾಯಿತು ಎನ್ನುವುದು ವೈಎಸ್‌ಆರ್ ರಾಯಲಸೀಮಾ ಕಾರ್ಯಕರ್ತರ ಅಭಿಪ್ರಾಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+