ಕೋಲಾರ ನ್ಯಾಯಾಧೀಶ ನರಹರಿ ಸೇವೆಯಿಂದ ಮುಕ್ತ ಮುಕ್ತ

ಕೋಲಾರದಿಂದ ಬೆಳಗಾವಿಗೆ ವರ್ಗಾವಣೆಗೊಂಡರೂ ಕಚೇರಿಯ ದೂರವಾಣಿ ಬಳಸಿ ತಿಂಗಳೊಂದಕ್ಕೆ ಸಾವಿರಾರು ಬಾರಿ ಕರೆ ಮಾಡುವುದನ್ನು ಮುಂದುವರಿಸಿದ್ದ ನ್ಯಾಯಾಧೀಶ ಜಿ.ನರಹರಿ ಅವರನ್ನು ಸೇವೆಯಿಂದ ಅಮಾನತು ಮಾಡಿ ರಾಜ್ಯಪಾಲರು ಮೊನ್ನೆ ಆದೇಶಿಸಿದ್ದಾರೆ. ಈ ಆದೇಶವನ್ನು ಜುಲೈ 14ರಂದು ಗೆಜೆಟ್ ನಲ್ಲೂ ಪ್ರಕಟಿಸಲಾಗಿದೆ.
ಕೋಲಾರದಲ್ಲಿ ತಮ್ಮ ಅಧೀನದಲ್ಲಿ ಸೇವೆ ಸಲ್ಲಿಸುತ್ತಿದ್ದ ಬೆರಳಚ್ಚುಗಾರ್ತಿ ಪ್ರಿಯಮಣಿ (ಹೆಸರು ಬದಲಾಗಿದೆ) ಅವರೊಂದಿಗೆ ಮಾತನಾಡಿದ್ದೇ ಅವರಿಗೆ ಈಗ ಮುಳುವಾಗಿದೆ. ಇವರ ವಿರುದ್ಧ ಹೈಕೋರ್ಟ್‌ನಿಂದ ನಡೆದ ತನಿಖೆಯಿಂದ ಕರೆಯ ಗುಟ್ಟು ರಟ್ಟಾಗಿದೆ. 1999ರಿಂದ ನಡೆದ ಕಚೇರಿಯಿಂದ ಕರೆ ವಿವಾದ ಈಗ ಸೇವೆಯಿಂದ ವಜಾಗೊಳ್ಳುವುದರೊಂದಿಗೆ ಮುಕ್ತಾಯಗೊಂಡಿದೆ.
ನರಹರಿ ಅವರು 1999ರ ಮೇ ತಿಂಗಳಿನಿಂದ 2000ರ ಮೇ ವರೆಗೆ ಕೋಲಾರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. ಇದೇ ಅವಧಿಯಲ್ಲಿ ಪ್ರಿಯಮಣಿ ಅವರು ಅಲ್ಲಿಯೇ ಬೆರಳಚ್ಚುಗಾರ್ತಿಯಾಗಿದ್ದರು. 2002ರ ಮೇ 27ರಂದು ನರಹರಿಗೆ ಬೆಳಗಾವಿಗೆ ವರ್ಗಾವಣೆಯಾಯಿತು. ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಕೋಲಾರದಲ್ಲಿನ ಪ್ರಿಯಮಣಿ ಅವರ ದೂರವಾಣಿಗೆ ತಿಂಗಳೊಂದಕ್ಕೆ ಸುಮಾರು 600 ಹಾಗೂ ಅವರ ಸಹೋದರರ ಮನೆಯ ದೂರವಾಣಿಗೆ 57 ಬಾರಿ ಕರೆ ಮಾಡಿದ್ದರು! ನರಹರಿ ಅವರ ಕಚೇರಿ ಸಂಖ್ಯೆ 420500 ಪ್ರಿಯಮಣಿ ಕೋಲಾರ ಕಚೇರಿ ದೂರವಾಣಿ ಸಂಖ್ಯೆ 26981.
'ಕೋಲಾರ ಕೋರ್ಟ್‌ನ ಇತರ ಸಿಬ್ಬಂದಿಯ ಕುಶಲೋಪರಿ ತಿಳಿದುಕೊಳ್ಳಲು ಅವರ ಬಳಿ ಮಾತನಾಡಲು ಕರೆ ಮಾಡಿದ್ದೆನೇ ವಿನಾ ಪ್ರಿಯಮಣಿ ಅವರ ಜೊತೆಯಲ್ಲ'ಎನ್ನುವುದು ಈ ನ್ಯಾಯಾಧೀಶರ ಸ್ಪಷ್ಟನೆಯಾಗಿತ್ತು. ಆದರೆ ವಿಚಾರಣೆ ವೇಳೆ ಇದನ್ನು ಇತರ ಸಿಬ್ಬಂದಿ ಅಲ್ಲಗಳೆದಿದ್ದರು.
ಮಾತ್ರವಲ್ಲದೇ ಪ್ರಿಯಮಣಿ ಹೆರಿಗೆಗೆಂದು ರಜೆ ಹಾಕಿದ್ದ ಸಂದರ್ಭದಲ್ಲಿ ಕಚೇರಿಗೆ ಒಂದೂ ಕರೆ ಬಂದಿರಲಿಲ್ಲ, ಬದಲಿಗೆ ಅವರ ಸಹೋದರನ ಮನೆಗೆ ಕರೆ ಬಂದಿತ್ತು ಎನ್ನುವುದು ತನಿಖೆಯಿಂದ ಸಾಬೀತಾಯಿತು.
ಪ್ರಿಯಮಣಿ ಅವರ ಪತಿ, ಭಾವ ಹಾಗೂ ಮಾವ ಕ್ರಿಮಿನಲ್ ಪ್ರಕರಣವೊಂದರಲ್ಲಿ ಸಿಲುಕಿದ್ದು, ಅದರ ವಿಚಾರಣೆಯನ್ನು ನರಹರಿಯವರೇ ನಡೆಸುತ್ತಿದ್ದರು. ಆರೋಪಿಗಳನ್ನು ಮನೆಗೆ ಕರೆಯುವಂತಿಲ್ಲ ಎಂಬ ಕಾನೂನು ಮೀರಿ, ಈ ಎಲ್ಲ ಆರೋಪಿಗಳನ್ನು ತಮ್ಮ ಮನೆಯ ಧಾರ್ಮಿಕ ಕಾರ್ಯಕ್ರಮಗಳಿಗೆ ಆಮಂತ್ರಣ ನೀಡಿದ್ದರು. ಪ್ರಕರಣದ ವಿಚಾರಣೆ ವೇಳೆ ಆರೋಪಿಗಳ ಹೇಳಿಕೆಗಳನ್ನು ಪ್ರಿಯಮಣಿ ಅವರ ಕೈಬರಹದಲ್ಲಿಯೇ ಬರೆಸಿದ್ದರು. ಅಷ್ಟೇ ಅಲ್ಲದೇ ಸರಿಯಾದ ವಿಚಾರಣೆ ನಡೆಸದೆ ಎಲ್ಲರನ್ನೂ ಆರೋಪ ಮುಕ್ತರನ್ನಾಗಿಸಿರುವುದೂ ತನಿಖೆಯಿಂದ ಬಹಿರಂಗಗೊಂಡಿತು.
ಇಷ್ಟೇ ಅಲ್ಲದೇ, ಪ್ರಿಯಮಣಿಗೆ ಕೋರ್ಟ್ ಅವಧಿಯಲ್ಲಿಯೇ ಕಾಲೇಜೊಂದರಲ್ಲಿ ವ್ಯಾಸಂಗ ಮಾಡಲೂ ಇವರು ಅನುಮತಿ ನೀಡಿದ್ದರು. ಕೋರ್ಟ್‌ನಿಂದ ಸುಮಾರು 35 ಕಿ.ಮೀ. ದೂರ ಇರುವ ಕೆಜಿಎಫ್‌ನ ಕಾಲೇಜೊಂದಕ್ಕೆ ಪ್ರಿಯಮಣಿ ಹೋಗಿಬರುತ್ತಿದ್ದರು. ಆದರೆ ಅವರು ಎಲ್ಲಿ ಹೋಗಿ ಬರುತ್ತಿದ್ದಾರೆ ಎಂಬ ಬಗ್ಗೆ ತನಿಖೆಯ ವೇಳೆ ಮಾಹಿತಿ ನೀಡಲು ನರಹರಿ ವಿಫಲರಾಗಿದ್ದರು. ಪ್ರಿಯಮಣಿ ಜೊತೆ ಅನುಮಾನಾಸ್ಪದ ಸಂಬಂಧ ಇರುವ ಕಾರಣದಿಂದಲೇ ನರಹರಿಯವರು ಈ ರೀತಿ ಮಾಡಿದ್ದಾರೆ ಎಂದು ವಜಾ ಆದೇಶದಲ್ಲಿ ತಿಳಿಸಲಾಗಿದೆ.
ಹೈಕೋರ್ಟ್ ನಿಯಮದ ಅನ್ವಯ ನ್ಯಾಯಾಧೀಶರು ಯಾವುದೇ ದುಬಾರಿ ವಸ್ತು ಖರೀದಿ ಮಾಡುವ ಮುನ್ನ ಹೈಕೋರ್ಟ್ ಅನುಮತಿ ಪಡೆಯಬೇಕು ಇಲ್ಲವೇ ವಸ್ತು ಖರೀದಿಸಿದ ನಂತರ ಅದನ್ನು ಹೈಕೋರ್ಟ್ ಗಮನಕ್ಕೆ ತರಬೇಕು. ಆದರೆ 2004ರ ಅವಧಿಯಲ್ಲಿ ನರಹರಿಯವರು ಎರಡು ದುಬಾರಿ ಮೊಬೈಲ್ ಫೋನ್ ಖರೀದಿ ಮಾಡಿದ್ದರು. ಆದರೆ ಆ ಕುರಿತು ಹೈಕೋರ್ಟ್ ಗಮನಕ್ಕೆ ತಂದಿರಲಿಲ್ಲ.
ಎಲ್ಲಾ ಅಪಾದನೆ ಕುರಿತಾಗಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ತಮ್ಮ ಪರವಾಗಿ ಸಾಕ್ಷ್ಯ ಹೇಳುವಂತೆ ಮೊಬೈಲ್‌ನಿಂದ ಪ್ರಿಯಮಣಿ ಅವರಿಗೆ 71 ಬಾರಿ ಕರೆ ಮಾಡಿದ್ದರು. ಈ ಎಲ್ಲವೂ ಸೇರಿ ಅವರು ತಮ್ಮ ಕೆಲಸದಿಂದ ನಿರ್ಗಮಿಸುವಂತಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications