ಇನ್ಫೋಸಿಸ್ ನಾರಾಯಣಮೂರ್ತಿಗೆ ನರೇಂದ್ರ ಮೋದಿ ಬಂಪರ್ ಆಫರ್

ಇದೊಂದು ಸಂಪೂರ್ಣ ಸ್ವಾಯತ್ತ ಸಂಸ್ಥೆಯಾಗಲಿದ್ದು, ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸುವುದು ಇದರ ಧ್ಯೇಯೋದ್ದೇಶವಾಗಲಿದೆ. ಮೂರ್ತಿ ಅಂತಹ ಮೇರು ವ್ಯಕ್ತಿತ್ವದವರು ಯುವ ಪ್ರತಿಭೆಗಳಿಗೆ ತಮ್ಮ ಅನುಭವ ಧಾರೆಯೆರೆದರೆ ಅದು ನಿಜಕ್ಕೂ ಗುಜರಾತಿನ ಸೌಭಾಗ್ಯವೆಂದು ಪರಿಗಣಿಸುವುದಾಗಿ ಮೋದಿ ಹೇಳಿದ್ದಾರೆ.
ಈ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿರುವ ಮೂರ್ತಿ, ಕೆಲಸ-ಕಾರ್ಯಗಳ ಒತ್ತಡ ಅಧಿಕವಾಗಿದೆ. ಆದರೂ ಮೋದಿ ಆಹ್ವಾನವನ್ನು ಒಪ್ಪಿಕೊಳ್ಳುವ ಬಗ್ಗೆ ಆಲೋಚಿಸುವುದಾಗಿ ಮೂರ್ತಿ ಹೇಳಿದ್ದಾರೆ. ಆಗಸ್ಟ್ 20ರಂದು ಇನ್ಫೋಸಿಸ್‌ನಿಂದ ಮೂರ್ತಿ ನಿವೃತ್ತರಾಗಲಿದ್ದಾರೆ.
ನಾರಾಯಣ ಮೂರ್ತಿ ಅವರು ಇತ್ತೀಚೆಗಷ್ಟೇ ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ (PHFI) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಪ್ರತಿಷ್ಠಾನ ದೇಶದಾದ್ಯಂತ ಸಾರ್ವಜನಿಕ ಆರೋಗ್ಯ ಶಾಲೆಗಳನ್ನು ತೆರೆಯಲಿದೆ.
ಗುಜರಾತಿನಲ್ಲಿ ಇನ್ಫೋಸಿಸ್ ಕೇಂದ್ರವೊಂದನ್ನು ಸ್ಥಾಪಿಸುವ ಬಗ್ಗೆ ಉತ್ಸುಕರಾಘಿರುವುದಾಗಿ ಮೋದಿಗೆ ಮೂರ್ತಿ ನಿವೇದನೆ ಮಾಡಿಕೊಂಡರು. ಇದಕ್ಕೂ ಮೊದಲೇ ಇನ್ಫೋಸಿಸ್ ಕಂಪನಿ ರಾಜ್ಯ ಸರಕಾರವನ್ನು ಸಂಪರ್ಕಿಸಿದ್ದು, ಇನ್ಫಿ ಕೇಂದ್ರದ ಸ್ಥಾಪನೆಗಾಗಿ ನಿವೇಶನ ಮಂಜೂರು ಮಾಡುವಂತೆ ಅಧಿಕಾರಿಗಳನ್ನು ಕೋರಿದೆ. ನಿವೇಶನ ಲಭ್ಯವಾಗುತ್ತಿದ್ದಂತೆ ಗುಜರಾತಿನಲ್ಲಿ ಇನ್ಫೋಸಿಸ್ ತನ್ನ ಮೊದಲ ಕೇಂದ್ರವನ್ನು ಸ್ಥಾಪಿಸಿವುದು ಖಚಿತ ಎಂದು ತಿಳಿದುಬಂದಿದೆ.












Click it and Unblock the Notifications