ಸ್ಫೋಟ ತನಿಖೆಗಾಗಿ ಬಿಪಿನ್ ಗೋಪಾಲಕೃಷ್ಣ ಮುಂಬೈಗೆ

ಸೋಮವಾರ ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಎಡಿಜಿಪಿ ಬಿಪಿನ್ ಗೋಪಾಲಕೃಷ್ಣ ಅವರು ಮುಂಬೈಗೆ ತೆರಳಿದರು ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಮಹಾರಾಷ್ಟ್ರ ಎಟಿಎಸ್ ತಂಡದ ಅಧಿಕಾರಿಗಳು ಪರಪ್ಪನ ಅಗ್ರಹಾರದಲ್ಲಿ ಬಂಧಿತ ಕೆಲ ಕೈದಿಗಳ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದೆ.
ಮುಂಬೈ ಬಾಂಬ್ ಸ್ಫೋಟ ಪ್ರಕರಣ ತನಿಖೆಯಲ್ಲಿ ಮಹಾರಾಷ್ಟ್ರ ಪೊಲೀಸರಿಗೆ ನೆರವು ನೀಡುವ ಸಲುವಾಗಿ ಕರ್ನಾಟಕ ತಂಡ ತೆರಳಿದೆ ಎನ್ನಲಾಗುತ್ತಿದ್ದು, ಬೆಂಗಳೂರಿನಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಕುರಿತು ಸಹ ಮಾಹಿತಿ ನೀಡಲಿದೆ ಎಂದು ತಿಳಿದು ಬಂದಿದೆ.
ಮತ್ತೂಂದೆಡೆ ಮುಂಬೈ ಎಟಿಎಸ್ ಸಹ ತನಿಖೆ ಮುಂದುವರಿದಿದೆ. ಪರಪ್ಪರನ ಅಗ್ರಹಾರದಿಂದ ಮುಂಬೈ ಬಾಂಬ್ ಸ್ಫೋಟದ ದಿನ ಹಾಗೂ ಅದರ ಹಿಂದಿನ ಮೂರು ದಿನಗಳು ಅವಧಿಯಲ್ಲಿ ಹೋಗಿರುವ ದೂರವಾಣಿ ಕರೆಗಳನ್ನು ಎಟಿಎಸ್ ಪರಿಶೀಲನೆ ನಡೆಸಿದ್ದು, ಅನುಮಾನಸ್ಪದ ಕರೆಗಳ ಕುರಿತು ಕೆಲ ಕೈದಿಗಳ ವಿಚಾರಣೆ ಸಹ ನಡೆಸಿದೆ ಎನ್ನಲಾಗುತ್ತಿದೆ.












Click it and Unblock the Notifications