ಜೂ ಸರಸ: ಗಂಡಿನ ಕರೆಗೆ ಓಗೊಡದ ಹೆಣ್ಣು ಬರ್ಬರ ಹತ್ಯೆ

ಕಾಮೋದ್ರಿಕ್ತನಾದ ಹಿಪ್ಪೋಪೊಟಮಸ್ ತನ್ನ ಸಂಗಾತಿಯನ್ನು ಸರಸಕ್ಕೆ ಕರೆದಿದೆ. ಆದರೆ, ಒಲ್ಲೆ ಎಂದು ಹೆಣ್ಣು ದೂರ ಸರಿದಿದೆ. ಇದರಿಂದ ಕೋಪಗೊಂಡ ನೀರಾನೆ ತನ್ನ ಸಂಗಾತಿ ಮೇಲೆ ಬಲಾತ್ಕಾರ ಮಾಡಿ, ಹಿಂಸಿಸಿ ಕೊಂದು ಹಾಕಿದೆ.
ಮಾರ್ಚ್ 2010 ರಲ್ಲಿ ಕಾನ್ಪುರದಿಂದ ಸಕ್ಕರ್ ಬಾರ್ಗ್ ಜೂ ಗೆ ಕಾಲಿಟ್ಟ ಈ ಎರಡು ಜೋಡಿ ಜೀವಗಳು ಪ್ರಾಣಿ ಸಂಗ್ರಹಾಲಯದ ಆಕರ್ಷಣೆಯಾಗಿದ್ದವು. ಆದರೆ, ನೆನ್ನೆ ನಡೆದ ಸರಸ ಕಾಳಗದಲ್ಲಿ ಹೆಣ್ಣು ಅಸುನೀಗಿದೆ. ನಮಗೆ ಈ ವಿಷಯ ತಿಳಿದಾಗ ಪರಿಸ್ಥಿತಿ ಕೈ ಮೀರಿತ್ತು.
ತೀವ್ರವಾಗಿ ಗಾಯಗೊಂಡಿದ್ದ ಹೆಣ್ಣು ನೀರಾನೆ ದಾರುಣ ಸ್ಥಿತಿಯಲ್ಲಿತ್ತು. ಅದರ ಕಿಬ್ಬೊಟ್ಟೆಗೆ ಬಲವಾದ ಗಾಯವಾಗಿತ್ತು. ಉಳಿಸಿಕೊಳ್ಳಲು ಎಲ್ಲಾ ರೀತಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸಾಮಾನ್ಯವಾಗಿ ಈ ರೀತಿ ನೀರಾನೆ ಉದ್ರೇಕಗೊಳ್ಳುವುದಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಜೂ ನಿರ್ವಾಹಕ ವಿಜೆ ರಾಣಾ ಹೇಳಿದ್ದಾರೆ.












Click it and Unblock the Notifications