ಉಡುಪಿಯಲ್ಲಿ ಮಳೆ ನಿಂತು ಈಗ ಬಿಸಿಲು ಹೂ

ಕರಾವಳಿಯಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದೆ. ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಸೋಮವಾರ ಮತ್ತು ಮಂಗಳವಾರ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮಂಗಳೂರಲ್ಲಿ ಗಾಳಿ ಮಳೆಯಿಂದಾಗಿ ನಗರದ ವಿವಿಧೆಡೆ ಸುಮಾರು ಹತ್ತಕ್ಕೂ ಹೆಚ್ಚ್ಹುಮನೆಗಳ ಮಾಡುಗಳಿಗೆ ಹಾನಿ ಸಂಭವಿಸಿಸುವ ಘಟನೆ ವರದಿಯಾಗಿವೆ. ಮಳೆ-ಗಾಳಿಯಿಂದಾಗಿ ಮರಗಳು ಮನೆಗಳ ಮೇಲೆ ಉರುಳಿ ಹಂಚುಗಳು ಒಡೆದು ಆತಂಕ ಉಂಟಾಗಿದೆ. ಮಂಗಳಾದೇವಿ ದೇವಸ್ಥಾನದ ಮೇಲ್ಚಾವಣಿಗೂ ಹಾನಿ ಸಂಭವಿಸಿದೆ.
ಉಪ್ಪಿನಂಗಡಿ ಸಮೀಪ ಸುಬ್ರಹ್ಮಣ್ಯ- ಕಡಬ ಸಂಪರ್ಕಿಸುವ ಹೊಸಮಠ ಸೇತುವೆ ನೀರಿನಲ್ಲಿ ಮುಳುಗಿದ್ದು ಈ ಸೇತುವೆ ಮೇಲೆ ವಾಹನ ಸಂಚಾರ ಸ್ಥಗಿತಗೊಂಡಿದೆ. ಬಂಟ್ವಾಳ ಕೆಳಗಿನ ಪೇಟೆ, ಜೈನರಪೇಟೆ, ಬಸ್ತಿಪಡ್ಪು ಮುಂತಾದ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಭೀತಿಯಲ್ಲಿವೆ.
ನೇತ್ರಾವತಿ ನದಿ ಉಕ್ಕಿಹರಿಯುತ್ತಿದ್ದು ತಗ್ಗುಪ್ರದೇಶಗಳು ಮುಳುಗುವ ಭೀತಿಯಲ್ಲಿವೆ. ಮುಂದಿನ 24 ಗಂಟೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತ ಸೂಚಿಸಿದೆ.
;











Click it and Unblock the Notifications