ಅಮರ್ ನಾಥ್ ಯಾತ್ರಿಕರ ಸಾವಿನ ಸಂಖ್ಯೆ 80ಕ್ಕೆ ಏರಿಕೆ

ಸಮುದ್ರ ಮಟ್ಟದಿಂದ ಸುಮಾರು 3880 ಮೀಟರ್ ಎತ್ತರದಲ್ಲಿರುವ ಗುಹಾಂತರ ದೇಗುಲದಲ್ಲಿ ಶಿವನ ಸನ್ನಿಧಿಯನ್ನು ಕಂಡ ನಂತರ ಉತ್ತರ ಪ್ರದೇಶದ 76 ವರ್ಷದ ಎಂಆರ್ ವರ್ಮ, ತೀವ್ರ ಎದೆ ನೋವು ಅನುಭವಿಸಿದ ಕ್ಷಣಾರ್ಧದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ರಾಜಸ್ತಾನದ 31 ವರ್ಷ ವಯಸ್ಸಿನ ಆನಂದ್ ಸೋನಿ ಹಾಗೂ ಮಧ್ಯ ಪ್ರದೇಶದ 62 ವರ್ಷ ವಯಸ್ಸಿನ ಲೇಖ್ ರಾಮ್ ವರು ಕೂಡಾ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ.
ನೈಸರ್ಗಿಕವಾಗಿ ರೂಪಿತವಾದ ಶಿವನ ಲಿಂಗವನ್ನು ಕಾಣಲು 46 ದಿನಗಳ ಕಾಲದ ಪವಿತ್ರ ಯಾತ್ರೆ ಕೈಗೊಳ್ಳುವ ಹಿಂದೂ ಯಾತ್ರಾರ್ಥಿಗಳಿಗೆ ಪೋರ್ಟರ್ ಆಗಿ ಲಗೇಜ್ ಹೊತ್ತು ತಿರುಗುವ ಮುಸ್ಲಿಮರಲ್ಲಿ ಕೆಲವರು ಕೂಡಾ ವ್ಯತಿರಿಕ್ತ ಹವಾಮಾನಕ್ಕೆ ಹೊಂದಿಕೊಳ್ಳಲಾರದೆ ಸಾವನ್ನಪ್ಪಿದ್ದಾರೆ.
ಗಂಡರ್ ಬಾಲ್ ಜಿಲ್ಲೆಯ ಬಾಲ್ತಾಲ್ ಬೇಸ್ ಕ್ಯಾಂಪ್ ನಿಂದ ದೇಗುಲದ ಕಡೆಗೆ 14,016 ಯಾತ್ರಾರ್ಥಿಗಳು ತೆರಳಿದ್ದಾರೆ ಹಾಗೂ ಪಹಲ್ ಗಾಮ್-ನುನ್ ವಾನ್ ಕಡೆಯಿಂದ 6,558 ಜನ ಪ್ರಯಾಣ ಬೆಳೆಸಿದ್ದಾರೆ. ಸುಮಾರು 4.35 ಲಕ್ಷ ಯಾತ್ರಾರ್ಥಿಗಳು ಹಿಮ ಲಿಂಗ ರೂಪಿ ಶಿವನ ದರ್ಶನ ಪಡೆದು ಪುನೀತರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications