ದಾವಣಗೆರೆ: ವಕೀಲನೇ ನಿಂತು ಕಳ್ಳತನಕ್ಕೆ ಸ್ಕೆಚ್ ಹಾಕಿಕೊಟ್ಟ

ನಾಲ್ವರನ್ನು ಪುಡಿಗಳ್ಳರನ್ನು ಹಿಡಿದು ದೊಡ್ಡ ಕಳ್ಳತನದ ಡೀಲೊಂದನ್ನು ಒಪ್ಪಿಸಿದ್ದ. ಡೀಲೇನಪ್ಪ ಅಂದ್ರೆ, ನೀವು ಸಣ್ಣಪುಟ್ಟ ಕಳ್ಳತನ ಮಡ್ಬೇಡ್ರಿ, ಒಂದೇ ಸಲ 1 ಕೋಟಿ ರು. ಮೌಲ್ಯದ ಕಳ್ಳತನ ಮಾಡಿ ಅಂತ ಹೇಳಿ, ಅದಕ್ಕೆ ಬೇಕಾಗಿದ್ದ ಸ್ಕೆಚ್ ರೆಡಿಮಾಡಿಕೊಟ್ಟಿದ್ದ.
ಸ್ಕೆಚ್ ಪ್ರಕಾರ ನಾಲ್ವರು ಯುವಕರು ಮನೆ ನುಗ್ಗಿ ಕಳ್ಳತನ ಮಾಡಿದರು. ಆದರೆ, ವಕೀಲ ಮಹಾಶಯ ಹೇಳಿದಷ್ಟು ಹಣ ಸಿಗಲಿಲ್ಲ. 1.10 ಲಕ್ಷ ಮೌಲ್ಯದ ಚಿನ್ನಾಭರಣ, 2.5ಲಕ್ಷ ನಗದು, 30 ಸಾವಿರ ಬೆಲೆ ಬಾಳುವ ವಾಚು, ಮೊಬೈಲುಗಳನ್ನು ಮಾತ್ರ ಯುವಕರು ಕಳ್ಳತನ ಮಾಡಿದ್ದರು.
ಇದರಿಂದ ಬೇಸತ್ತ ವಕೀಲ ಹುಡುಗರಿಗೆ ನಾಲ್ಕು ಏಟು ಬಾರಿಸಿ, ನೆಟ್ಟಗೆ ಕಳ್ಳತನ ಮಾಡೋಕು ಬರಲ್ವಲ್ಲ ಅಂತ ಹೇಳಿ, ಅವರನ್ನು ಊರು ಬಿಟ್ಟು ಕಳಿಸಿದ್ದ. ಇದಾದ ಕೆಲವೇ ದಿನಗಳಲ್ಲಿ ನಾಲ್ವರು ಯುವಕರ ಪೈಕಿ ಒಬ್ಬ ಸಿಕ್ಕಿಬಿದ್ದ.
ಸಿಕ್ಕಿಬಿದ್ದ ಯುವಕ ಎಲ್ಲಾ ಕಥೆ ಬಾಯಿಬಿಟ್ಟ. ಆರೋಪಿ ಯುವಕರು ಕೊಟ್ಟ ಮಾಹಿತಿ ಮೇರೆಗೆ ವಕೀಲನ ಅಥ ಪಥ ಪತ್ತೆ ಹಚ್ಚಿ, ವಶಕ್ಕೆ ತೆಗೆದುಕೊಂಡಿದ್ದಾರೆ. ಇಲ್ಲಿ ಇನ್ನೊಂದು ಆಶ್ಚರ್ಯದ ಸಂಗತಿ ಎಂದರೆ, ಈ ವಕೀಲ ಇಂಥ 25 ಮನೆಗಳ ಸ್ಕೆಚ್ ರೆಡಿಮಾಡಿ ಇಟ್ಟುಕೊಂಡಿದ್ದನಂತೆ.












Click it and Unblock the Notifications