ಕಚೇರಿಗೆ ಕುಡಿದು ಬಂದಿದ್ದ ವಾರ್ತಾಧಿಕಾರಿ ಅಮಾನತು
ಯಾದಗಿರಿ,
ಜು. 16 : ಕಚೇರಿಗೆ ಕುಡಿದುಬಂದು ಸಹಾಯಕ ಆಯುಕ್ತೆ ಎದುರಿಗೇ ಅಸಭ್ಯವಾಗಿ ವರ್ತಿಸಿದ್ದ ಯಾದಗಿರಿ ಜಿಲ್ಲೆಯ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಹಾಯಕ ನಿರ್ದೇಶಕ ಸಂಕಪ್ಪ ಲಮಾಣಿ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. id="toptextpromo">ಈ
ಸುದ್ದಿ ತಿಳಿದ ತಕ್ಷಣ ಸಹಾಯಕ ಆಯುಕ್ತೆ ಕವಿತಾ ಮನ್ನಿಕೇರಿ ಭೇಟಿ ನೀಡಿ ಪರಿಶೀಲಿಸಿದರು. ಸಹಾಯಕ ಆಯುಕ್ತರು ವಿಚಾರಿಸಿದಾಗ, ಮಧ್ಯಾಹ್ನ ನಂತರ ರಜೆ ತೆಗೆದುಕೊಂಡು ಕುಡಿದಿದ್ದೇನೆ ಎಂದು ದರ್ಪದಿಂದ ಉತ್ತರ ನೀಡಿದರು. ಈ ಘಟನೆ ಜುಲೈ 8ರಂದು ಟಿ.ವಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. id='are-slot-1' class='oiad oi-axt oiadv'> id='top-searched-articles'>ಈ
ಹಿನ್ನೆಲೆಯಲ್ಲಿ ಶುಕ್ರವಾರ ಯಾದಗಿರಿ ಜಿಲ್ಲಾಧಿಕಾರಿ ಗುರ್‌ನೀತ್ ತೇಜ್ ಮೆನನ್ ಅವರು ಕರ್ನಾಟಕ ನಾಗರೀಕ ಸೇವಾ (ವರ್ಗಿಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1)ರ ಪ್ರಕಾರ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತು ಮಾಡಿ ಆದೇಶಿಸ ಹೊರಡಿಸಿದ್ದಾರೆ.











Click it and Unblock the Notifications