ಬಿಜೆಪಿಯ ಕಾರ್ಯಕಾರಿಣಿ ಸಭೆಯಿಂದ ಅನಂತ್ ಎಸ್ಕೇಪ್

ಮುಂಬೈ ಬಾಂಬ್ ಸ್ಫೋಟ, ಬೆಲೆ ಏರಿಕೆ, ಯಡಿಯೂರಪ್ಪ ಸರ್ಕಾರದ ಹಗರಣಗಳು, ಸಂಪುಟ ವಿಸ್ತರಣೆ ಇನ್ನೂ ಅನೇಕ ಮುಖ್ಯ ವಿಷಯಗಳು ಇಂದು ಹಾಗೂ ನಾಳೆ ಚರ್ಚೆಯಾಗಲಿದೆ. ಇದರ ನಡುವೆ ಅನಂತ್ ಎಸ್ಕೇಪ್ ವಿಷ್ಯ ಮುಖ್ಯವಾಗಲೇ ಇಲ್ಲ. ಕಾಯುವತನಕ ಕಾಯ್ದ ಮಾಧ್ಯಮ ಮಿತ್ರರು ಅನಂತ್ ಗೆ ಫೋನಾಯಿಸಿಯೇಬಿಟ್ಟರು.
ಇಲ್ಲ ನನಗೆ ಇತ್ತೀಚಿನ ರಾಜಕೀಯದಿಂದ ಬೇಸರ ಬಂದಿದೆ. ಭಯೋತ್ಪಾದಕರ ಪರ ಕೇಂದ್ರದ ಮೃದು ಧೋರಣೆ, ರಾಹುಲ್ ಗಾಂಧಿ ಎಳಸು ಪ್ರತಿಕ್ರಿಯೆ ನೋಡಿದರೆ ರೇಜಿಗೆ ಹುಟ್ಟುತ್ತದೆ. ಯುಪಿಎ ಸರ್ಕಾರ ಎಲ್ಲಾ ಕ್ಷೇತ್ರದಲ್ಲೂ ವಿಫಲವಾಗಿದೆ ಎಂದರು. ಅದು ಸರಿ ಸಭೆಗೆ ಏಕೆ ಹಾಜರಾಗಿಲ್ಲ ಎಂದು ಕೇಳಿದರೆ ಉತ್ತರ ಹೇಳದೆ ಅನಂತ್ ಮತ್ತೆ ಯುಪಿಎ ವಿರುದ್ಧ ದಾಳಿ ಶುರು ಮಾಡಿಕೊಂಡರು.
ಈ ಮಧ್ಯೆ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್ ಅವರು http://www.bjprajyakaryakarini.in/ ಎಂಬ ವೆಬ್ ತಾಣಕ್ಕೆ ಚಾಲನೆ ನೀಡಿದರು. ಆದರೆ, ವೆಬ್ ತಾಣ ಇನ್ನೂ ಸ್ಥಗಿತ ಸ್ಥಿತಿಯಲ್ಲೇ ಇದೆ. ಕಾರ್ಯಕಾರಿ ಸಭೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕೆಎಸ್ ಈಶ್ವರಪ್ಪ, ಸದಾನಂದ ಗೌಡ, ಪ್ರಹ್ಲಾದ ಜೋಶಿ, ಸಿಎಂ ಉದಾಸಿ, ಸಿಸಿ ಪಾಟೀಲ, ಬಸವರಾಜ್ ಬೊಮ್ಮಾಯಿ ಸೇರಿದಂತೆ ಅನೇಕ ಸಚಿವರು, ಶಾಸಕರು, ಸಂಸದರು, ಪದಾಧಿಕಾರಿಗಳು ಭಾಗವಹಿಸಿದ್ದರು.












Click it and Unblock the Notifications