ಸಿಟಿ ಬಸ್ ಸರ್ವೀಸ್ ನಿಂದ ಹೊಟ್ಟೆಗೆ ತಣ್ಣೀರು ಬಟ್ಟೆ: ಆಟೋ ಡ್ರೈವರ್ಸ್

Auto rckshaw strike in Hassan
ಹಾಸನ, ಜು 15: ಇಲ್ಲಿನ ಬಡಾವಣೆಗಳಲ್ಲಿ ನಗರ ಬಸ್ ಸಂಚಾರ ಆರಂಭಿಸಿದ ಕೆಲ ತಿಂಗಳುಗಳಲ್ಲೇ ಅದರ ಬಿಸಿ ಆಟೋರಿಕ್ಷಾ ಚಾಲಕರಿಗೆ ತಟ್ಟಿದೆ. ಸಿಟೀ ಬಸ್ ಸರ್ವೀಸ್ ವಿರೋಧಿಸಿ ಆಟೋ ಮಾಲೀಕರು ಮತ್ತು ಚಾಲಕರು ಮೂರು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದು, ಸಾರ್ವಜನಿಕರಿಗೆ ತುಂಬಾ ಕಷ್ಟವಾಗಿದೆ.

ಜಿಲ್ಲಾಡಳಿತ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ಆಟೋ ಚಾಲಕರು ಎಚ್ಚರಿಸಿದ್ದಾರೆ. ಹಾಸನ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಅಂಬೇಡ್ಕರ್ ಭಾವಚಿತ್ರದೊಂದಿಗೆ ಆಟೊ ಚಾಲಕರು ಮತ್ತು ಮಾಲಕರು ಧರಣಿ ಸತ್ಯಾಗ್ರಹ ಮುಂದುವರಿಸಿದ್ದಾರೆ.

ಏಕೆ ಈ ಧರಣಿ?: ನಗರದೊಳಗೆ ಅರ್ಧ ಕಿ.ಮೀ. ದೂರದಲ್ಲಿರುವ ಬಡಾವಣೆಗಳಿಗೂ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ನಾಗರಿಕರಿಗೆ ಅನುಕೂಲವಾಗುತ್ತಿದೆ. ಆದರೆ ಆಟೊ ಚಾಲಕರು ನಷ್ಟಕ್ಕೆ ಸಿಲುಕಿದ್ದಾರೆ. ಹಾಸನ ಬಸ್ ಸ್ಟ್ಯಾಂಡ್ ನಿಂದ ತಣ್ಣೀರು ಹಳ್ಳ ಕ್ರಾಸ್ ಗೆ ದಿನ ಆಟ ಓಡಿಸಿ ಜೀವನ ಸಾಗಿಸುತ್ತಿದ್ದ ಅಬ್ದುಲ್ಲಾ, ಈಗ ತಲೆ ಮೇಲೆ ಕೈ ಹೊತ್ತಿಕೊಂಡು ಕೂತಿದ್ದಾನೆ. ಇದೇ ಅನೇಕ ಚಾಲಕರು ದೈನಂದಿನ ಜೀವನ ಸಾಗಿಸಲು ಹೆಣಗುತ್ತಿದ್ದಾರೆ.

ಆಟೋರಿಕ್ಷಾ ಚಾಲಕರ ಮನವಿ ಸ್ವೀಕರಿಸಿರುವ ಜಿಲ್ಲಾಧಿಕಾರಿ ಜಗದೀಶ್, 15 ದಿನಗಳ ಕಾಲಾವಕಾಶ ಕೋರಿದ್ದೇವೆ. ಈಗಲೇ ಹೊಟ್ಟೆಗೆ ಹಿಟ್ಟಿ ಇಲ್ಲದೆ ಉಪವಾಸ ಇದ್ದೀವಿ. ಸಭೆ ಕರೆದು ಸಮಸ್ಯೆ ಕೂಡಲೇ ಪರಿಹರಿಸಿ, ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಆಟೋ ಚಾಲಕರ ಸಂಘ ಎಚ್ಚರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+