ಸರ್ಕಾರಕ್ಕೆ ಸೈಟು ಹಿಂತಿರುಗಿಸಿದ ದೊರೆಸ್ವಾಮಿ ನಾಯ್ಡು

Prof MR Doreswamy
ಬೆಂಗಳೂರು ಜು 14: ವಿವಾದಿತ ಪಿಇಎಸ್ ಶಿಕ್ಷಣ ಸಂಸ್ಥೆ ಸೈಟು ಪ್ರಕರಣ ಕೋರ್ಟಿನಿಂದ ಹೊರಗಡೆಯೇ ಅಂತ್ಯ ಕಂಡಿದೆ. ಯಡಿಯೂರಪ್ಪ ಅವರ ಸ್ವಜನ ಪಕ್ಷಪಾತದ ಕೃಪೆಯಿಂದ ಬನಶಂಕರಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನಿವೇಶನ ಪಡೆದಿದ್ದ ಪಿಇಎಸ್ ಶಿಕ್ಷಣ ಸಂಸ್ಥೆ ಇಂದು ನಿವೇಶನವನ್ನು ಹಿಂತಿರುಗಿಸಿದೆ.

ಬನಶಂಕರಿ 1ನೇಹಂತದ 115X120 ವಿಸ್ತೀರ್ಣದ(16,100 ಚ.ಅ) ಸುಮಾರು 30 ಕೋಟಿ ಮೌಲ್ಯದ ನಿವೇಶನವು ಹನುಮಂತನಗರದ ಪಿಇಎಸ್ ಶಿಕ್ಷಣ ಸಂಸ್ಥೆಗೆ ನೀಡಲಾಗಿತ್ತು. ಸೋನಾರ್ ಯುವಕ ಸಂಘಕ್ಕೆ ಸೇರಿದ್ದ ಈ ಜಾಗ ಮಂದಿರ ನಿರ್ಮಾಣಕ್ಕೆ ಮೀಸಲಾಡಲಾಗಿತ್ತು. ಆದರೆ, ಮುಖ್ಯಮಂತ್ರಿಗಳು ತಮ್ಮ ಪ್ರಭಾವ ಬೀರಿ, ಸುಮಾರು 30 ವರ್ಷಗಳ ಅವಧಿಗೆ ಬಿಡಿಎ ನಿವೇಶನವನ್ನು ಲೀಸ್ ಗೆ ಕೊಡಿಸಿದ್ದರು.

ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಹೈಕೋರ್ಟ್ ನಿಂದ ನೋಟಿಸ್ ಬಂದಿದ್ದರಿಂದ ನಿವೇಶನವನ್ನು ಹಿಂತಿರಿಗಿಸಿದ್ದೇವೆ. ಖಾಲಿ ಇದ್ದ ಜಾಗವನ್ನು ನಾವು ಗುತ್ತಿಗೆಗೆ ಪಡೆದಿದ್ದೆವು. ಲೀಜ್ ಮೊತ್ತ ಸೇರಿ 54 ಲಕ್ಷ 91 ಸಾವಿರ ಖರ್ಚು ಮಾಡಿದ್ದೇವೆ. ಬಿಡಿಎ ಇದೇ ನಿವೇಶನವನ್ನು ನೋಟಿಫೈ ಮಾಡಿ ನಿಯಮಗಳನ್ನು ಆಧಾರಿಸಿ ಮತ್ತೆ ನೀಡಿದರೆ ಅದನ್ನು ಪಡೆಯಲು ಯತ್ನಿಸುವುದಾಗಿ ಪ್ರೊ ದೊರೆಸ್ವಾಮಿ ಹೇಳಿದ್ದಾರೆ.

ಪ್ರೇರಣಾ ಟ್ರಸ್ಟ್ ನಲ್ಲಿ ನಾನು ಮಾರ್ಗದರ್ಶಕಾನಗಿದ್ದೇನೆ ಹೊರತು ಯಾವುದೇ ದೇಣಿಗೆ ನೀಡಿಲ್ಲ. ಟ್ರಸ್ಟ್ ಗೆ 1 ಕೋಟಿ ನೀಡಿದ್ದೇನೆ. ಅದರ ಬದಲಿಗೆ ಇಲ್ಲಿ ಸಿಎ ನಿವೇಶನ ಪಡೆದಿದ್ದೇನೆ ಎಂಬ ಸುದ್ದಿ ಸುಳ್ಳು. ಭೂಗಳ್ಳರ ವಿರುದ್ಧ ಹೋರಾಟ ನಡೆಸುತ್ತಿರುವ ನಾನು ಅಕ್ರಮ ಭೂಮಿ ಹೊಂದುವ ಯತ್ನ ಎಂದೂ ನಡೆಸಿಲ್ಲ ಎಂದು ಎಂಎಲ್ ಸಿ ದೊರೆಸ್ವಾಮಿ ಸುದ್ದಿಗಾರರಿಗೆ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+