ಬಾಂಬ್ ಸ್ಫೋಟ ಮುಂದೈತೆ ಮಾರಿ ಹಬ್ಬ :ನರೇಂದ್ರ ಮೋದಿ

Narendra Modi on Mumbai Blast
ಗಾಂಧಿ ನಗರ ಜು 13: ಮುಂಬೈ ಸರಣಿ ಬಾಂಬ್ ಸ್ಫೋಟ 2011ಕ್ಕೆ ಬಲಿಯಾದವರ ಸಂಕ್ಯೆ 21 ಕ್ಕೇರಿದೆ ಸುಮಾರು 113 ಜನ ಗಾಯಾಳುಗಳಾಗಿದ್ದಾರೆ. ಉಗ್ರರ ಈ ದುಷ್ಕೃತ್ಯದ ಯಾವುದೇ ಸುಳಿವು ಸಿಕ್ಕಿರಲಿಲ್ಲ ಎಂದು ಕೇಂದ್ರ ಗೃಹ ಇಲಾಖೆ ಹೇಳಿಕೆ ನೀಡಿದೆ. ಈ ಮಧ್ಯೆ ಇದು ಮಹಾ ಪಾತಕದ "ಡ್ರೆಸ್ ರಿಹರ್ಸಲ್ " ಮಾತ್ರ ಮುಂದೈತೆ ಮಾರಿಹಬ್ಬ, ಎಚ್ಚರ ಎಚ್ಚರ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ವಾಣಿಜ್ಯ ನಗರಿ ಮುಂಬೈ ಮೇಲೆ ದಾಳಿ ಮಾಡುವ ಭಾರತಕ್ಕೆ ತೀವ್ರ ಆರ್ಥಿಕ ಹಿನ್ನೆಡೆ ಉಂಟು ಮಾಡಲು ಉಗ್ರರು ಯೋಜಿಸಿದ್ದಾರೆ. ದಾದರ್, ಝವೇರಿ ಬಜಾರ್ ಹಾಗೂ ಒಪೇರಾ ಹೌಸ್ ನಂಥ ಜನನಿಬಿಡ ಪ್ರದೇಶಗಳನ್ನು ಆಯ್ದುಕೊಂಡು ಜನರಲ್ಲಿ ಆತಂಕ ಉಂಟು ಮಾಡಲು ಯೋಜಿತ ಉಗ್ರರ ಗುಂಪು ಯತ್ನಿಸುತ್ತಿದೆ. ಆದರೆ, ಯಾವುದೆ ಪ್ರಬಲ ಬಾಂಬ್ ಸ್ಫೋಟಕ್ಕೆ ಅಂಜದೆ, ಅಳುಕದೆ ದಿಟ್ಟವಾಗಿ ಎಲ್ಲವನ್ನು ಎದುರಿಸುವ ಛಾತಿ ಮುಂಬೈ ಜನರಿಗೆ ಇದೆ.

ಗ್ಯಾಲರಿ : ಮುಂಬೈ ಸರಣಿ ಸ್ಫೋಟ 2011| ವಿಡಿಯೋಗಳು: ಉಗ್ರರ ಕೈವಾಡ| ಸಾವು ನೋವು | ಯಾರು ಹೊಣೆ|

ಜುಲೈ 13ರಂದು ನಡೆದ ಸರಣಿ ಸ್ಫೋಟ ತೀರಾ "ಸಣ್ಣ ಕಾರ್ಯಾಚರಣೆ", ಉಗ್ರರ ಟಾರ್ಗೆಟ್ ಇನ್ನೂ ದೊಡ್ಡದಿದೆ. ಉಗ್ರರ ಸುಳಿವು ಸಿಕ್ಕಿಲ್ಲ ಎನ್ನುವ ಕೇಂದ್ರ ಸರ್ಕಾರಕ್ಕೆ ನಾಚಿಕೆಯಾಗಬೇಕು. ಈ ಸರ್ಕಾರ ಇರುವವರೆಗೂ ಭಯೋತ್ಪಾದನೆ ಚಟುವಟಿಕೆಗಳಿಗೆ ರಹದಾರಿ ನೀಡಿದಂತೆ ಎಂದು ಮೋದಿ ತಮ್ಮ ವ್ಯಥೆಯನ್ನು ತೋಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+