ಸ್ಫೋಟದ ಗಂಧಕಗಾಳಿ ಗುಪ್ತಚರ ಇಲಾಖೆಗೆ ಬಡಿದಿರಲಿಲ್ಲ
ಮುಂಬೈ,
ಜುಲೈ 14: ಬುಧವಾರದ ಮುಂಬೈ ಸ್ಫೋಟದ ಬಗ್ಗೆ ಗುಪ್ತಚರ ಇಲಾಖೆಗೆ ಯಾವುದೇ ಸುಳಿವು, ಮಾಹಿತಿ ಲಭ್ಯವಾಗಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು, ಪರೋಕ್ಷವಾಗಿ ಗುಪ್ತ ಚರ ಇಲಾಖೆಯ ವೈಫಲ್ಯವನ್ನು ಸಾರಾಸಗಟಾಗಿ ಒಪ್ಪಿಕೊಂಡಿದ್ದಾರೆ. id="toptextpromo">ಸರಣಿ
ಸ್ಫೋಟಗಳು ಯೋಜಿತ ಕೃತ್ಯವಾಗಿದ್ದು, ಅತ್ಯಾಧುನಿಕ ಸಾಧನಗಳನ್ನು ಬಳಸಲಾಗಿದೆ. ಇದು ಭಯೋತ್ಪಾದಕರ ಕೃತ್ಯ. ಅಮೋನಿಯಂ ನೈಟ್ರೇಟ್, ಟೈಮರ್ ಗಳನ್ನು ಅಳವಡಿಸಲಾಗಿತ್ತು. ದೂರಸಂವೇದಿ ಬಾಂಬ್ ಇದಾಗಿರಲಿಲ್ಲ. ನಿಗದಿತ ಸಮಯಕ್ಕೆ ಅನುಗುಣವಾಗಿ ಹೆಚ್ಚು ತೀವ್ರತೆಯಿಲ್ಲದ ಸ್ಫೋಟಗಳಾಗಿವೆ ಎಂದು ಚಿದು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮುಂಬೈ
ಸ್ಫೋಟ 2011 ಇದುವರೆಗೆ 18 ಮಂದಿಯನ್ನು ಬಲಿತೆಗೆದುಕೊಂಡಿದೆ. 23 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಒಟ್ಟು 131 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಅಂಕಿ ಅಂಶಗಳನ್ನು ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರು ಸ್ಫೋಟದಲ್ಲಿ ಮಡಿದವರ ಕುಟುಂಬದವರಿಗೆ ತಲಾ 5 ಲಕ್ಷ ರು. ಪರಿಹಾರ ನೀಡುವುದಾಗಿ ಘೋಷಿಸಿದರು.











Click it and Unblock the Notifications