50 ಕೆರೆಗಳ ನೀರು ಕುಡಿದ ಇಂಜಿನಿಯರುಗಳು ಮನೆಗೆ

ಗುರಮಠಕಲ್ ವಿಧಾನಸಭೆ ಕ್ಷೇತ್ರದ ಸಣ್ಣ ನೀರಾವರಿ ಇಲಾಖೆಯ 2009-10ನೇ ಸಾಲಿನಲ್ಲಿ ಸುಮಾರು 50 ಕೆರೆಗಳ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಮಂಜೂರಾಗಿದ್ದ ಹಣದಲ್ಲಿ ಅರ್ಧಕ್ಕಿಂತ ಹೆಚ್ಚು ಹಣವನ್ನು ಗುಳುಂ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.
2.5 ಕೋಟಿ ರೂಪಾಯಿ ಯೋಜನೆಯಲ್ಲಿ 1 ಕೋಟಿ ರೂಪಾಯಿ ಕೆಲಸ ಮಾತ್ರ ಆಗಿದ್ದು, ಇನ್ನು 1 ಕೋಟಿ 50 ಲಕ್ಷ ರೂಪಾಯಿಯಲ್ಲಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿ ಇಂಜಿನಿಯರ್‌ಗಳನ್ನು ಬುಧವಾರ ಅಮಾನತುಗೊಳಿಸಲಾಗಿದೆ.
ಕಳೆದ ತಿಂಗಳು ಜೂನ್ 18ರಂದು ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ಮಾಡಲು ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್ ಅವರು ಯಾದಗಿರಿ ಜಿಲ್ಲೆಗೆ ಬಂದಾಗ ತಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.
ಅಮಾನತು ಗೊಂಡ ಅಧಿಕಾರಿಗಳು:
1) ಬಸವರಾಜ ಹಾರಕೋಡೆ - ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು
2) ಶಾಂತಮಲ್ಲಪ್ಪ ಶಿವಕೇರಿ - ಸಹಾಯಕ ಅಭಿಯಂತರರು
3) ಶರಣಪ್ಪ - ಸಹಾಯಕ ಅಭಿಯಂತರರು
4) ಚನ್ನಬಸಪ್ಪ ಕಿರಿಯ ಇಂಜಿನಿಯರ್
5) ಕೆ.ಭೀಮರೆಡ್ಡಿ - ಕಿರಿಯ ಇಂಜಿನಿಯರ್
6) ಪಿ.ಬಿ.ಚವ್ಹಾಣ್ - ಕಿರಿಯ ಇಂಜಿನಿಯರ್
7) ಬಸವರಾಜ ಟಕ್ಕಳಕಿ - ಕಿರಿಯ ಇಂಜಿನಿಯರ್
8) ಗುರುರಾಜ ಕುಲಕರ್ಣಿ - ಕಿರಿಯ ಇಂಜಿನಿಯರ್
9) ಅಬ್ದುಲ್ ಫಜಲ್ - ಕಿರಿಯ ಇಂಜಿನಿಯರ್
10) ಸಯ್ಯದ್ ಮುಕ್ತಾರ _ ಕಿರಿಯ ಇಂಜಿನಿಯರ್
11) ಹಣಮಂತ - ಕಿರಿಯ ಇಂಜಿನಿಯರ್
12) ಮಜೀದ ಚಂದ - ಕಿರಿಯ ಇಂಜಿನಿಯರ್












Click it and Unblock the Notifications