ಕುಟುಂಬಕ್ಕೆ ಒಂದೇ ಕಾರು, ಪಾರ್ಕಿಂಗ್ ಇದ್ದರೆ ಕಾರು

ನಗರದಲ್ಲಿ ಹೆಚ್ಚುತ್ತಿರುವ ವಾಹನ ಸಂಖ್ಯೆಯಿಂದ ಪಾರ್ಕಿಂಗ್ ಸಮಸ್ತೆ ಉಲ್ಬಣಿಸಿದೆ. ಹಾಗಾಗಿ ರಾಜ್ಯ ಪ್ರಮುಖ ನಗರಗಳಲ್ಲಿ ಈ ಹೊಸ ನಿಯಮ ಜಾರಿಗೆ ತರಲಾಗುವುದು ಎಂದು ಸಾರಿಗೆ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ರಾಜ್ಯದ ಎಲ್ಲ ಪ್ರಮುಖ ನಗರಗಳಲ್ಲಿ, ದಿನನಿತ್ಯ ಕಾರುಗಳ ಸಂಖ್ಯೆ ಹೆಚ್ಚಾಗಿ, ರಸ್ತೆಗಳಲ್ಲಿ ಒತ್ತಡ ಹೆಚ್ಚಾಗಿದೆ. ಕಾರು ನಿಲ್ಲಿಸಲು ಸ್ವಂತ ಸ್ಥಳ ಅವಕಾಶ ಇಲ್ಲದಿದ್ದರೂ, ಖರೀದಿ ಮಾಡಿ, ರಸ್ತೆ ಬದಿಯಲ್ಲಿ ನಿಲ್ಲಿಸುವುದರಿಂದ ಪ್ರಯಾಣಕ್ಕೆ ತುಂಬಾ ತೊಂದರೆಯಾಗುತ್ತಿದೆ. ಇದು ಅಪಘಾತಕ್ಕೂ ಎಡೆಮಾಡಿ ಕೊಡುತ್ತದೆ. ಅದರಲ್ಲಿ ಕೆಲವರು ಒಂದಕ್ಕಿಂತ ಹೆಚ್ಚು ಕಾರುಗಳನ್ನು ಖರೀದಿ ಮಾಡಿ, ರಸ್ತೆಯಲ್ಲೆ ನಿಲ್ಲಿಸಿ, ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ.[ಕಾರು ಬೇಕೆ ಕ್ಲಿಕ್ ಮಾಡಿ]
ಕಾರು ನೋಂದಣಿ ಮಾಡಿಸುವ ಸಂದರ್ಭದಲ್ಲಿ ತಮ್ಮ ಕಾರಿಗೆ ಮೀಸಲಿರುವ ಜಾಗದ ವಿವರ ನೀಡಲೇಬೇಕು. ಇಲ್ಲದೇ ಹೋದರೆ ಅಂತಹ ಕಾರಿನ ನೋಂದಣಿ ಕಾರ್ಯ ನಡೆಯುವುದಿಲ್ಲ ಎಂದು ಅಶೋಕ್ ಹೇಳಿದ್ದಾರೆ. ಮುಂದಿನ ನಾಲ್ಕು ವರ್ಷಗಳಲ್ಲಿ 20 ಲಕ್ಷ ಕಾರುಗಳು ರಸ್ತೆಗಳಲ್ಲಿ ಕಾಣಿಸುವ ಆತಂಕ ಎದುರಾಗಿದೆ ಎಂದರು. ಈ ನಡುವೆ 40 ಸಾವಿರ ಹೊಸ ಆಟೋರಿಕ್ಷಾಗಳಿಗೆ ಪರವಾನಿಗೆ ನೀಡಿರುವುದನ್ನು ಸಚಿವ ಅಶೋಕ್ ಸಮರ್ಥಿಸಿಕೊಂಡರು.












Click it and Unblock the Notifications