ಪಟ್ಟಭದ್ರ ಹಿತಾಸಕ್ತಿಗಳಿಂದ ಕೈಜಾರಿದ ಕಾನೂನು : ಮೊಯ್ಲಿ

ಮಂಗಳವಾರ ನಡೆಸಿದ ಕೇಂದ್ರ ಸಚಿವ ಸಂಪುಟ ಪುನಾರಚನೆಯಲ್ಲಿ ಆಗಿರುವ ಬದಲಾವಣೆಗಳು ಯುಪಿಎ ಸರಕಾರದಲ್ಲಿ ಅಹಿತಕರ ಗಾಳಿಯನ್ನು ಬೀಸಿದೆ. ಕಾನೂನು ಪದವಿ ತಪ್ಪಿದ್ದಕ್ಕಾಗಿ ಮೊಯ್ಲಿ ಬುಸುಗುಡುತ್ತಿದ್ದರೆ, ಕಾಂಗ್ರೆಸ್ಸಿಗರಾದ ಗುರುದಾಸ್ ಕಾಮತ್ ಮತ್ತು ಶ್ರೀಕಾಂತ್ ಜೇನಾ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟೆಲಿಕಾಂ ಪ್ರಕರಣ ಸೇರಿದಂತೆ ಸುಪ್ರೀಂ ಕೋರ್ಟಿನಲ್ಲಿ ಅನೇಕ ಕೇಸುಗಳಲ್ಲಿ ಸೋಲು ಉಂಡಿದ್ದು ಯುಪಿಎಗೆ ಅರಗಿಸಿಕೊಳ್ಳಲು ಆಗದಿರುವುದು ಮೊಯ್ಲಿ ಎತ್ತಂಗಡಿಗೆ ಪ್ರಮುಖ ಕಾರಣ. ಆದರೆ, "ಆಡಳಿತಾತ್ಮಕ ತಪ್ಪಿನಿಂದಾಗಿ ಕಾನೂನು ಸಚಿವಾಲಯ ಹೊಡೆತ ತಿನ್ನಬೇಕಾಯಿತು. ತಾವು ತಂದ ಕೆಲ ಸುಧಾರಣೆಗಳೂ ಕೆಲವರ ಕಣ್ಣು ಕುಕ್ಕಿತು" ಎಂಬ ವ್ಯಾಖ್ಯಾನ ಮೊಯ್ಲಿ ನೀಡಿದ್ದಾರೆ.
ಮಾಧ್ಯಮದ ಮೇಲೂ ಗೂಬೆ ಕೂರಿಸಿದ ಮೊಯ್ಲಿ, "ವಸ್ತುಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ, ಕಣ್ಣಿದ್ದೂ ಕುರುಡನಂತೆ ವರ್ತಿಸಿದೆ" ಎಂದು ಅವರು ಕೆಂಡ ಕಾರಿದ್ದಾರೆ. ಆದರೂ ಕಾನೂನು ಮಂತ್ರಾಲಯದಲ್ಲಿ ತಂದಿರುವ ಸುಧಾರಣೆ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿಕೊಂಡಿದ್ದಾರೆ.












Click it and Unblock the Notifications