ಡಿಎಂಕೆ ಸ್ಥಾನ ಇನ್ನೂ ಭರ್ತಿಯಾಗಿಲ್ಲ; ಮುಂದಿದೆ ಮಾರಿ ಹಬ್ಬ

ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮಂಗಳವಾರ ನಡೆಸಿದ ಪುನರ್ ರಚನೆ ಕಸರತ್ತಿನಲ್ಲಿ ದೂರಸಂಪರ್ಕ ಮತ್ತು ಜವಳಿ ಖಾತೆಗೆ ನೂತನ ಸಚಿವರನ್ನು ನೇಮಿಸಿಲ್ಲ. ಈ ಖಾತೆಗಳು ಕ್ರಮವಾಗಿ ರಾಜಾ ಮತ್ತು ದಯಾನಿಧಿ ಮಾರನ್ ಕೈಯಲ್ಲಿದ್ದವು. 2ಜಿ ಸ್ಪೆಕ್ಟ್ರಂ ಹಗರಣದಿಂದಾಗಿ ಅವರು ಖಾತೆಗಳನ್ನು ಕಳೆದುಕೊಂಡಿದ್ದಾರೆ. ರಾಜಾ ಅಂತೂ ಜೈಲು ಪಾಲಾಗಿದ್ದಾರೆ. ಮಾರನ್ ತಲೆಯ ಮೇಲೆ ಸಿಬಿಐ ತೂಗುಕತ್ತಿ ಇದೆ.
ಪುನಾರಚನೆಗೆ ಪೂರ್ವಭಾವಿಯಾಗಿ ವಿತ್ತ ಸಚಿವ ಪ್ರಣವ್ ಮುಖರ್ಜಿ ಚೆನ್ನೈನಲ್ಲಿ ಕರುಣಾನಿಧಿಯವರನ್ನು ಭೇಟಿ ಮಾಡಿದಾಗ ಸದ್ಯಕ್ಕೆ ಕಂಬಿ ಎಣಿಸುತ್ತಿರುವ ಮಗಳು ಕನಿಮೋಳಿಗೆ ನೆರವಾಗುವ ಮಾರ್ಗಗಳನ್ನು ಕಂಡುಕೊಳ್ಳುವುದರಲ್ಲಿ ತಾನು ವ್ಯಸ್ತನಾಗಿರುವುದರಿಂದ ಪುನರ್ ರಚನೆ ಬಗ್ಗೆ ಚಿಂತಿಸಲು ಪುರುಸೊತ್ತಿಲ್ಲ ಎಂದು ಹೇಳಿ ಕರುಣಾನಿಧಿ ಅವರನ್ನು ವಾಪಸು ಕಳುಹಿಸಿದ್ದಾರೆ.
ಜುಲೈ 23-24ರಂದು ಕೊಯಂಬತ್ತೂರಿನಲ್ಲಿ ಡಿಎಂಕೆ ಸಾಮಾನ್ಯ ಸಭೆ ನಡೆಯಲಿದ್ದು ಅದರಲ್ಲಿ ಕೇಂದ್ರ ಸಂಪುಟಕ್ಕೆ ಯಾರನ್ನು ಕಳುಹಿಸುವುದೆಂದು ತೀರ್ಮಾನವಾಗಲಿದೆ. 16 ಸಂಸದರನ್ನು ಹೊಂದಿರುವ ಡಿಎಂಕೆ ಯುಪಿಎಯ ಪ್ರಮುಖ ಘಟಕ ಪಕ್ಷವಾಗಿದೆ. ಹಗರಣಗಳ ರಗಳೆಯಿಂದಾಗಿ ಡಿಎಂಕೆ ಬೆಂಬಲ ಹಿಂದೆಗೆದುಕೊಂಡರೆ ಅಥವಾ ಬಾಹ್ಯ ಬೆಂಬಲ ನೀಡಲು ತೀರ್ಮಾನಿಸಿದರೆ ಸಮಾಜವಾದಿ ಪಾರ್ಟಿ ಮತ್ತು ಬಿಎಸ್‌ಪಿಯ ಯುಪಿಎ ಮೇಲೆ ಹೆಚ್ಚು ಅವಲಂಬಿತವಾಗಿರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಹಗರಣ ಕಳಂಕಿತ ಡಿಎಂಕೆಯನ್ನು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾದ ಸ್ಥಿತಿಯಿದೆ.












Click it and Unblock the Notifications