ರಾಸಲೀಲೆ: ಸನ್ ಟಿವಿ ಮೇಲೆ ಬಿತ್ತು ಮತ್ತೊಂದು ಕೇಸು
ಚೆನ್ನೈ,
ಜುಲೈ 13: ಸ್ವಾಮಿ ನಿತ್ಯಾನಂದ ಅವರೊಂದಿಗೆ ತಮ್ಮನ್ನು ಅಶ್ಲೀಲ ಭಂಗಿಗಳಲ್ಲಿ ತೋರಿಸಲಾದ ಚಿತ್ರಗಳನ್ನು ತಿರುಚಲಾಗಿದೆ ಎಂದು ಸನ್ ನೆಟ್‌ವರ್ಕ್ ಮಾಲಿಕ ಕಲಾನಿಧಿ ಮಾರನ್ ವಿರುದ್ಧ ನಟಿ ರಂಜಿತಾ ಪೊಲೀಸರಿಗೆ ಮಂಗಳವಾರ ದೂರು ನೀಡಿದ್ದಾರೆ. ಜಯರಾಂ ಜಯಲಲಿತಾ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ತರುವಾಯ ಡಿಎಂಕೆ ನಾಯಕರ ವಿರುದ್ಧ ಪೊಲೀಸ್ ಕೇಸುಗಳ ಜಡಿಮಳೆಯಾಗುತ್ತಿರುವುದು ಗಮನಾರ್ಹ. id="toptextpromo">ನಿತ್ಯಾನಂದ
ಅವರ ಜೊತೆಗೆ ತಾನಿರುವಂತೆ ಚಿತ್ರಗಳನ್ನು ತಿರುಚಲಾಗಿದೆ. ಅಲ್ಲದೇ ವಿಡಿಯೋ ಪ್ರಸಾರವನ್ನು ಸ್ಥಗಿತಗೊಳಿಸಬೇಕಾದರೆ ಹಣ ನೀಡುವಂತೆ ವ್ಯಕ್ತಿಯೋರ್ವ ಕೇಳಿದ್ದ ಎಂದು ಆಕೆ ದೂರು ನೀಡಿರುವುದಾಗಿ ನಗರ ಪೊಲೀಸ್ ಆಯುಕ್ತ ಜೆ.ಕೆ.ತ್ರಿಪಾಠಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ರಂಜಿತಾ
ನೀಡಿದ ದೂರನ್ನು ತನಿಖೆಗಾಗಿ ಕ್ರೈಂ ಬ್ರಾಂಚ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಕಳೆದ ವಾರವಷ್ಟೇ ಬಿಡದಿಯಲ್ಲಿರುವ ನಿತ್ಯಾನಂದ ಆಶ್ರಮ ಪೊಲೀಸರಿಗೆ ದೂರು ನೀಡಿದ್ದು, ಸನ್ ನೆಟ್‌ವರ್ಕ್ ಮಾಲಿಕ ಕಲಾನಿಧಿ ಮಾರನ್ ಮತ್ತು ಕಾರ್ಯನಿರ್ವಾಹಕ ಹನ್ಸರಾಜ್ ಸಕ್ಸೇನಾ ತಿರುಚಲಾದ ವೀಡಿಯೋ ತೋರಿಸಿ ತಾವು ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ಪ್ರದರ್ಶಿಸಿದ್ದರು ಎಂದು ದೂರಿದ್ದರು. [ಗ್ಯಾಲರಿ : ರಂಜಿತಾ ಪತ್ರಿಕಾಗೋಷ್ಠಿ]











Click it and Unblock the Notifications