ಅದು ಅನಂತ ನಿಧಿಯಲ್ಲ; ಪದ್ಮನಾಭಸ್ವಾಮಿಯ ಸಂಪತ್ತು

ದೇವಸ್ಥಾನದ ಸಂಪತ್ತು ನಿಧಿಯ ವ್ಯಾಖ್ಯೆಯಡಿ ಬರುತ್ತದೆ ಹಾಗೂ 'ಕೇರಳ ನಿಧಿ ಕಾಯಿದೆ' ಪ್ರಕಾರ ಸರಕಾರ ಈ ಸಂಪತ್ತನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಬೇಕೆಂಬ ವಾದ ಹುಟ್ಟಿಕೊಂಡಿರುವ ಹಿನ್ನೆಲೆಯಲ್ಲಿ ದೇವಸ್ವಂ ಸಚಿವ ವಿ. ಎಸ್. ಶಿವಕುಮಾರ್ ಸದನದಲ್ಲಿ ಈ ಹೇಳಿಕೆ ನೀಡಿ ಸರಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಸಿಪಿಎಂ ನಾಯಕ ಕೊಡಿಯೇರಿ ಬಾಲಕೃಷ್ಣನ್ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ನೀವು ಪದೇ ಪದೆ ದೇವಸ್ಥಾನದಲ್ಲಿ ಸಿಕ್ಕಿರುವುದನ್ನು 'ನಿಧಿ' ಎನ್ನುತ್ತಿದ್ದೀರಿ. ಅದು ನಿಧಿಯಲ್ಲ. ಬದಲಾಗಿ ದೇಗುಲದ ಸಂಪತ್ತು. ಬೆಲೆಕಟ್ಟಲಾಗದಷ್ಟು ಪ್ರಮಾಣದ ಸಂಪತ್ತು ಹೊಂದಿರುವ ದೇವಸ್ಥಾನಕ್ಕೆ ಕ್ಷಿಪ್ರ ಕಾರ್ಯಾಚರಣೆ ಪಡೆ ಮತ್ತು ರಾಜ್ಯ ಕಮಾಂಡೊ ಪಡೆಯ ಸಿಬ್ಬಂದಿಗಳನ್ನು ಬಳಸಿಕೊಂಡು ಅಭೇದ್ಯ ರಕ್ಷಣಾ ಏರ್ಪಾಡು ಮಾಡಲಾಗುವುದು ಎಂದರು.
ಸಂಪತ್ತಿನ ಮೌಲ್ಯದ ಕುರಿತು ಬಂದಿರುವ ವರದಿಯನ್ನು ಪ್ರಸ್ತಾವಿಸಿದ ಶಿವಕುಮಾರ್ ಈಗ ಅನಂತ ಪದ್ಮನಾಭಸ್ವಾಮಿ ದೇವಸ್ಥಾನ ದೇಶದ ಅತ್ಯಂತ ಶ್ರೀಮಂತ ಕ್ಷೇತ್ರವಾಗಿದೆ. ಅಂತೆಯೇ ಸಂಪತ್ತು ಸಿಕ್ಕಿದ ಬಳಿಕ ದೇವಸ್ಥಾನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗಿದೆ ಎಂದರು












Click it and Unblock the Notifications