ಕಣ್ಣೆದುರು ಕೊಲೆ ನಡೆಯುತ್ತಿದ್ದರೆ ಜನ ನಿಂತು ನೋಡುತ್ತಿದ್ದರು

ಹಾಡುಹಗಲೇ ಸಿನಿಮೀಯ ರೀತಿಯಲ್ಲಿ ಓರ್ವ ವ್ಯಕ್ತಿಯನ್ನು ಗೂಂಡಾಗಳು ಬಡಿದು ಸಾಯಿಸುತ್ತಿದ್ದರೆ ನೆರೆದಿದ್ದ ಜನ ಅದೊಂದು ಸಿನೆಮಾ ಶೂಟಿಂಗ್ ಎಂಬಂತೆ ಮೂಕರಾಗಿ ನೋಡುತ್ತಿದ್ದರು. ತಮ್ಮ ಕೆಲಸದಲ್ಲಿ 'ಬಿಜಿ'ಯಾಗಿದ್ದ ಸಾರ್ವಜನಿಕರು ಆತನನ್ನು ಉಳಿಸುವ ಅಥವಾ ಪೊಲೀಸರಿಗೆ ಕೂಡಲೆ ತಿಳಿಸುವ ಗೋಜಿಗೆ ಹೋಗಲಿಲ್ಲ.
ಪೊಲೀಸರು ಕೂಡ ಕೂಡಲೆ ಕ್ರಮ ತೆಗೆದುಕೊಳ್ಳಲಿಲ್ಲ. ನಾಲ್ವರು ಗೂಂಡಾಗಳ ಗ್ಯಾಂಗ್ ಅನ್ನು ಬಂಧಿಸಲು ಪೊಲೀಸರು ಎರಡು ದಿನ ತೆಗೆದುಕೊಂಡಿದ್ದಾರೆ. ಬೈಕ್ ಮೇಲೆ ಬರುತ್ತಿದ್ದ ಸಂತೋಷ್ ಎಂಬಾತನನ್ನು ಕುಡಿದ ಮತ್ತಿನಲ್ಲಿ ನಾಲ್ವರು ಬಡಿದು ಹೀನಾಯವಾಗಿ ಸಾಯಿಸಿದ್ದರು. ಈ ಘಟನೆ ಪೊಲೀಸ್ ಇಲಾಖೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ದಾಖಲಾಗಿದ್ದರಿಂದ ದುರುಳರನ್ನು ಹಿಡಿಯಲು ಸಾಧ್ಯವಾಯಿತು.
ಜನ ಉತ್ತರಿಸುವರೆ? : ಈ ಘಟನೆಗೆ ಸರಕಾರ ಮತ್ತು ಮೂಕ ಪ್ರೇಕ್ಷಕರಾಗಿ ನಿಂತಿದ್ದ 'ಬಿಜಿ' ಜನರನ್ನೇ ಕಾರಣ ಎಂದು ಸಂತೋಷ್ ಹೆಂಡತಿ ದೂರಿದ್ದಾಳೆ. "ಜನರಿಗೆ ಆತ್ಮಸಾಕ್ಷಿಯೆಂಬುದೇ ಇಲ್ಲ. ಆ ದುಷ್ಟರನ್ನು ಜನ ಅಟ್ಟಿಸಿಕೊಂಡು ಹೋಗಬಹುದಿತ್ತು. ಆತನನ್ನು ಉಳಿಸಲು ಜನರಿಗೆ ಸಾಧ್ಯವಿತ್ತು ಆದರೆ ಯಾರೂ ಏನೂ ಮಾಡಲಿಲ್ಲ. ನಿರ್ದಯಿ ಜನರು ಮತ್ತು ನಿರ್ಲಜ್ಜ ಸರಕಾರ ಇದಕ್ಕೆ ಉತ್ತರ ನೀಡಬೇಕು" ಎಂದು ಆಕೆ ಕಣ್ಣೀರಿನ ಕೋಡಿ ಹರಿಸಿದ್ದಾಳೆ.












Click it and Unblock the Notifications