ದೇಶದ ಅತಿದೊಡ್ಡ ಉಕ್ಕು ಕಾರ್ಖಾನೆಯಾಗಿ ಜಿಂದಾಲ್

Bellary on the path of development
ಬಳ್ಳಾರಿ, ಜು. 13 : ಜೆಎಸ್‌ಡಬ್ಲ್ಯು ಉಕ್ಕು ಕಾರ್ಖಾನೆ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಜುಲೈ 16ರಿಂದ 10 ಮೆಟ್ರಿಕ್ ಟನ್‌ಗೆ ಹೆಚ್ಚಿಸಿಕೊಂಡು ದೇಶದ ಅತಿದೊಡ್ಡ ಉಕ್ಕು ಕಾರ್ಖಾನೆ ಆಗಲಿದೆ ಎಂದು ಜಿಂದಾಲ್‌ನ ಸಿಇಓ ಡಾ. ವಿನೋದ್ ನಾವಲ್ ಅವರು ಘೋಷಣೆ ಮಾಡಿದ್ದಾರೆ.

ಜಿಲ್ಲಾ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಉನ್ನತೀಕರಿಸುವ 39 ಕೋಟಿ ರುಪಾಯಿ ವೆಚ್ಚದ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಬುಧವಾರ ಮಾತನಾಡಿದರು. "ದೇಶದ ಪ್ರಗತಿಗಾಗಿ - ಅಭಿವೃದ್ಧಿಗಾಗಿ ಸ್ಟೀಲ್ ಉದ್ಯಮ ಬೆಳೆಯಬೇಕಿದೆ. ಮೂಲಭೂತ ಸೌಲಭ್ಯಗಳನ್ನು ಒದಗಿಸಲಿಕ್ಕಾಗಿ ಸ್ಟೀಲ್ ಉದ್ಯಮ ಉತ್ಪನ್ನವನ್ನು ಹೆಚ್ಚಿಸಿಕೊಳ್ಳಬೇಕಿದೆ. ಬಳ್ಳಾರಿಯ ಸ್ಟೀಲ್ ವಿಶ್ವದ 80ಕ್ಕೂ ಹೆಚ್ಚಿನ ರಾಷ್ಟ್ರಗಳಿಗೆ ರವಾನೆ ಆಗಿ ದೇಶ - ವಿದೇಶಗಳಲ್ಲಿ ಖ್ಯಾತಿ ಪಡೆದಿದೆ" ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜಿ. ಜನಾರ್ದನರೆಡ್ಡಿ ಅವರು ಭೂಮಿಪೂಜೆ ನೆರವೇರಿಸಿ, "ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ. ನಗರದಲ್ಲಿ 23 ರಸ್ತೆಗಳನ್ನು 100 ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಇನ್ನೂ ಕೆಲ ರಸ್ತೆಗಳ ಅಭಿವೃದ್ಧಿಗಾಗಿ 100 ಕೋಟಿ ರುಪಾಯಿ ಹಣ ಬಿಡುಗಡೆ ಆಗಿದ್ದು, ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ" ಎಂದರು.

"ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ನಡೆದಿದೆ. ಜಿಂದಾಲ್ ಕೂಡ ಸ್ಥಳೀಯವಾಗಿ ಅಭಿವೃದ್ಧಿಗೆ ತನ್ನ ಕೊಡುಗೆ ಸಲ್ಲಿಸುತ್ತಿದೆ. ನೇರ ಮತ್ತು ಪರೋಕ್ಷವಾಗಿ ಉದ್ಯೋಗಗಳನ್ನು ನೀಡುತ್ತಿದೆ. ಜಿಲ್ಲೆಗೆ ಲಕ್ಷ್ಮಿ ಮಿತ್ತಲ್ ಮತ್ತು ಇನ್ನಿತರೆ ಕಂಪನಿಗಳು ಕಾಲಿಡುತ್ತಿವೆ. ಜಿಲ್ಲೆ ರಾಷ್ಟ್ರದ 'ಸ್ಟೀಲ್‌ಹಬ್" ಆಗಲಿದೆ" ಎಂದು ರೆಡ್ಡಿ ಭವಿಷ್ಯ ನುಡಿದರು.

ಮೇಯರ್ ಪಾರ್ವತಿ ಎಸ್. ಇಂದೂಶೇಖರ್, ಸಂಸದೆ ಜೆ. ಶಾಂತ ಮಾತನಾಡಿ, ಜಿಲ್ಲೆಯ ಕ್ರೀಡಾಪಟುಗಳು ರಾಜ್ಯ - ರಾಷ್ಟ್ರಮಟ್ಟಕ್ಕೆ ತಲುಪಲು ಅಗತ್ಯ ತರಬೇತಿ ಪಡೆಯಲು ಆಧುನಿಕ ಸ್ಟೇಡಿಯಂ ನೆರವಾಗಲಿದೆ ಎಂದರು. ಆರೋಗ್ಯ ಸಚಿವ ಬಿ. ಶ್ರೀರಾಮುಲು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+