ಕನ್ನಡಿಗರಿಗೆ ಮೀಸಲಾತಿ ನೀಡಲು ಎಚ್ ಎಎಲ್ ಒಪ್ಪಿಗೆ

ಖಾಲಿ ಇರುವ ಹುದ್ದೆಗಳಿಗೆ (ಸುಮಾರು 677) ನೇಮಕಾತಿ ಮಾಡುವಾಗ ಸ್ಥಳೀಯ ಕನ್ನಡಿಗರನ್ನು ಆಯ್ಕೆ ಮಾಡುವಂತೆ ಕೋರಲಾಗಿದೆ. ಇಲ್ಲದಿದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದೇವೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಸರೋಜಿನಿ ಮಹಿಷಿ ವರದಿ ಅನ್ವಯ ನೇಮಕಾತಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕೂಡಾ ಎಚ್ ಎಎಲ್ ವಿರುದ್ಧ ತಿರುಗಿ ಬಿದ್ದಿತ್ತು. ಸರೋಜಿನಿ ಮಹಿಷಿ ವರದಿ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಧೀನದಲ್ಲಿರುವ ಎಲ್ಲಾ ಇಲಾಖೆ ಹಾಗೂ ಕಾರ್ಖಾನೆಗಳ ಸಿ ಮತ್ತು ಡಿ ದರ್ಜೆ ನೇಮಕಾತಿಯಲ್ಲಿ ಶೇ 100 ರಷ್ಟು ಕನ್ನಡಿಗರಿಗೆ ಆದ್ಯತೆ ನೀಡಬೇಕು.
ಎಚ್ ಎಎಲ್ ನ ಬೆಂಗಳೂರು ಘಟಕದಲ್ಲಿ 15,162 ನೌಕರರಿದ್ದಾರೆ. ಅವರಲ್ಲಿ 11,262 ಮಂದಿ ಕನ್ನಡಿಗರು. ಖಾಲಿ ಹುದ್ದೆಗಳ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಬಗ್ಗೆ ಚಿಂತಿಸಲಾಗುವುದು. ಸೂಚನಾ ಫಲಕ, ಸಂಸ್ಥೆ ವರದಿ ಎಲ್ಲವೂ ಕನ್ನಡದಲ್ಲಿ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಎಚ್ ಎಎಲ್ ನ ಮಾನವ ಸಂಪನ್ಮೂಲ ಅಧಿಕಾರಿ ಸುಧಾಕರ್ ರಾವ್ ಹೇಳಿದ್ದಾರೆ.












Click it and Unblock the Notifications