ಕೇಂದ್ರ ಸಂಪುಟ: ಕರ್ನಾಟಕ ಸಚಿವರು ಸೇಫ್

ಜಯಂತಿ ನಟರಾಜನ್ ಅವರು ಹೊಸದಾಗಿ ಸಂಪುಟಕ್ಕೆ ಮರುಸೇರ್ಪಡೆಯಾಗಿದ್ದಾರೆ. ಡಿಎಂಕೆಯಿಂದ ಯಾರಿಗೂ ಮಣೆ ಹಾಕಿಲ್ಲ. ಮಮತಾ ಬ್ಯಾನರ್ಜಿ ಅವರ ಸ್ಥಾನದಲ್ಲಿ ದಿನೇಶ್ ತ್ರಿವೇದಿ ಅವರನ್ನು ರೈಲ್ವೆ ಖಾತೆ ಸಚಿವರನ್ನಾಗಿ ನೇಮಿಸಲಾಗಿದೆ. ಎಸ್.ಎಂ. ಕೃಷ್ಣ ಅವರು ಕೇಂದ್ರ ಸಂಪುಟದಿಂದ ಬಿಡುಗಡೆಗೊಂಡು ರಾಜ್ಯ ರಾಜಕೀಯಕ್ಕೆ ಮರಳಲಿದ್ದಾರೆ ಎಂಬ ಊಹಾಪೋಹಕ್ಕೂ ತೆರೆಬಿದ್ದಿದೆ.
ಪ್ರಧಾನಿ ಸೂಚನೆಯನ್ನು ಧಿಕ್ಕರಿಸಿದ ಮುಕುಲ್ ವರ್ಮಾ ಅವರನ್ನು ರೈಲ್ವೆ ಖಾತೆಯಿಂದ ಬಿಡುಗಡೆ ಮಾಡಲಾಗಿದ್ದು, ಶಿಪ್ಪಿಂಗ್ ಸಚಿವಾಲಯಕ್ಕೆ ಗಂಟುಹಾಕಲಾಗಿದೆ. ಜೈರಾಮ್ ರಮೇಶ್ ಗ್ರಾಮೀಣಾಭಿವೃದ್ಧಿ ಸಚಿವರನ್ನಾಗಿ ಬಡ್ತಿ ಪಡೆದಿದ್ದು, ಅವರು ನೋಡಿಕೊಳ್ಳುತ್ತಿದ್ದ ಪರಿಸರ ಖಾತೆಯನ್ನು ಜಯಂತಿಗೆ ವಹಿಸಲಾಗಿದೆ.
ದಯಾನಿಧಿ ಮಾರನ್, ಎಂ. ಎಸ್. ಗಿಲ್, ಮುರಳಿ ದೇವೂರಾ, ಬಿ.ಕೆ. ಹಂಡಿಕ್, ಕಾಂತಿ ಲಾಲ್ ಭುರಿಯಾ, ಸಾಯಿ ಪ್ರತಾಪ್, ಅರುಣ್ ಯಾದವ್ ಅವರನ್ನು ಸಚಿವ ಸ್ಥಾನದಿಂದ ಬಡುಗಡೆ ಮಾಡಲಾಗಿದೆ.












Click it and Unblock the Notifications