ಯಪ್ಪಾ ನಾ ಒಲ್ಲೆ ನಾ ಒಲ್ಲೆ ಎಂದು ಓಟಕಿತ್ತ ಸಿದ್ರಾಮಣ್ಣ!

ಉಭಯ ಕುಶಲೋಪರಿ ನಂತರ ಸಿನಿಮಾ ಬಗ್ಗೆ ವಿವರಣೆ ನೀಡಿದ ನಿರ್ಮಾಪಕರು, ಸಾರ್ ನಿಮಗೆ ಅಂಥ ಒಂದು ಒಳ್ಳೆ ಪಾತ್ರ ರೆಡಿ ಇದೆ ನೀವು ಒಪ್ಪಿಗೆ ಕೊಡಬೇಕು ಎಂದಿದ್ದಾರೆ. ಅಲ್ಲಿ ತನಕ ಖುಷಿಯಿಂದ ಕಥೆ ಕೇಳುತ್ತಿದ್ದ ಸಿದ್ದು, ಒಮ್ಮೆಗೆ ಕುರ್ಚಿಯಲ್ಲಿ ಹಾರಿ ಕುಳಿತು, ಯಪ್ಪಾ ನಾ ಒಲ್ಲೆ, ಸಿನಿಮಾ ಎಲ್ಲಾ ನನಗೆ ಆಗ್ಬರಕ್ಕಿಲ್ಲ ಅಂದಿದ್ದಾರೆ.
ದರ್ಶನ್ ನಾಯಕತ್ವದ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಎರಡನೇ ನಾಯಕನ ಪಾತ್ರವಹಿಸಿರುವ ಶಶಿ ಕೂಡಾ ಸಿದ್ರಾಮಣ್ಣ ನಿಮ್ಮ ಕೈಲಿ ಆಗುತ್ತೆ. ಇದು ಬಹಳ ಮಹತ್ವದ ಪಾತ್ರ. ರಸ್ತೆ ಮಾಡೋರೆಲ್ಲಾ ಸಿನಿಮಾದಾಗೆ ಮಿಂಚುತ್ತಿದ್ದಾರೆ. ನೀವು ಯಾಕೆ ಒಂದು ಕೈ ನೋಡಬಾರದು ಎಂದು ಏನೇನೋ ಹೇಳಿ ಫುಸಲಾಯಿಸಲು ನೋಡಿದ್ದಾರೆ.
ಯಾವುದಕ್ಕೂ ಜಗ್ಗದ ಕುರುಬರ ಕಿಂಗ್ ಸಿದ್ದು, ರಾಜಕೀಯ ದೊಂಬರಾಟವೇ ಸಾಕು. ಬೇಕಾದರೆ ಇನ್ನೊಂದು ಸಾರಿ ಪಾದಯಾತ್ರೆ ಮಾಡ್ತೀನಿ ಬಣ್ಣ ಹಚ್ಚಿ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲ. ಅದಕ್ಕೆಲ್ಲಾ ನಂಗೆ ಟೈಮಿಲ್ಲಾ ಎಂದಿದ್ದಾರೆ. ಬಂದ ದಾರಿಗೆ ಸುಂಕವಿಲ್ಲ ಎಂದು ಶಶಿ, ನಿರ್ಮಾಪಕ ಆನಂದ್ ವಾಪಾಸ್ಸಾಗಿದ್ದಾರೆ. ಅಂದಹಾಗೆ, ಹಿಂದೊಮ್ಮೆ ಸಿದ್ದರಾಮಯ್ಯ ಅವರ ಸುಪುತ್ರ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಮುಖಭಂಗ ಅನುಭವಿಸಿದ್ದ ಎಂಬುದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications