ಪೂಂಜಾಲಕಟ್ಟೆ ವಿದ್ಯಾರ್ಥಿನಿ ಸಾವಿನ ಹಿಂದೆ ಬಜರಂಗಿ ಕೈ?

Student Suicide Beltangady
ಬೆಳ್ತಂಗಡಿ, ಜು 10: ಪೂಂಜಾಲಕಟ್ಟೆ ಕಾಲೇಜಿನ ವಿದ್ಯಾರ್ಥಿನಿ ಗೇರುಕಟ್ಟೆ ನಿವಾಸಿ ಪ್ರಜ್ಞಾಲತಾ(19) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಈಗ ಹೊಸ ತಿರುವು ಪಡೆದಿದೆ. ತನ್ನ ಮಗಳ ಸಾವಿಗೆ ಬಜರಂಗ ದಳ ಕಾರ್ಯಕರ್ತ ಪುನೀತ್ ಎಂಬುವನೇ ಕಾರಣ ಎಂದು ಪ್ರಜ್ಞಾಲತಾ ತಾಯಿ ಆರೋಪಿಸಿದ್ದಾರೆ. ಪುನೀತ್ ಹಾಗೂ ಪ್ರಜ್ಞಾ ಪ್ರೇಮ ಪ್ರಕರಣ ಹೊರ ಬಿದ್ದ ನಂತರ ಬೆಳ್ತಂಗಡಿ ಠಾಣಾ ಪೊಲೀಸ್ ಈ ಕೇಸ್ ಮತ್ತೆ ಓಪನ್ ಮಾಡಿ ತನಿಖೆ ನಡೆಸಿದ್ದಾರೆ.

ಪ್ರಜ್ಞಾಲತಾ ಜೂ.7ರಂದುಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಜೀವನದಲ್ಲಿ ಜಿಗುಪ್ಸೆಯಿಂದ ಆತ್ಮಹತ್ಯೆ ಮಾಡಿದ್ದಾರೆ ಎಂದು ಷರಾ ಬರೆದು ಬೆಳ್ತಂಗಡಿ ಪೊಲೀಸರು ಪ್ರಕರಣಕ್ಕೆ ಇತಿಶ್ರೀ ಹಾಡಿದ್ದರು. ಆದರೆ, ಮಗಳ ಸಾವಿನ ನೋವಿನಲ್ಲಿ ಬಾಯಿ ತೆರೆಯದ ತಾಯಿ ಗೀತಾ, ಈಗ ಹೇಳುವ ಕಥೆ ಪೊಲೀಸರನ್ನು ಮತ್ತೆ ತನಿಖೆಗೆ ದೂಡುತ್ತಿದೆ. ಪ್ರಜ್ಞಾ ವಿಷ ಸೇವಿಸಿಲ್ಲ, ಯಾರೋ ಬಲವಂತವಾಗಿ ವಿಷ ನೀಡಿದ್ದಾರೆ. ಈ ಎಲ್ಲ ಘಟನೆಗೆ ಪುನೀತ್ ಕಾರಣ ಎಂದು ಗೀತಾ ಆರೋಪಿಸಿದ್ದಾರೆ.

ಪ್ರೀತಿ ಮದುವೆ ನಾಟಕದ ಹೀರೋ: ಕಳೆದ ಜನವರಿಯಲ್ಲಿ ಪ್ರಜ್ಞಾಲತಾಳನ್ನು ಬಲವಂತವಾಗಿ ಕರೆದೊಯ್ದು ಮಂಗಳೂರಿನ ದೇವಸ್ಥಾನವೊಂದರಲ್ಲಿ ಪುನೀತ್ ತಾಳಿ ಕಟ್ಟಿದ್ದನು. ಆಗ ಅವರಿಬ್ಬರೂ ಬೆಳ್ತಂಗಡಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಎ. ವಿದ್ಯಾರ್ಥಿಗಳಾಗಿದ್ದರು. ಕರಿಮಣಿ ಕಟ್ಟಿದ್ದ ಈತ ಅವಳೊಂದಿಗೆ ಭಾವಚಿತ್ರ ತೆಗೆಸಿ ಕಾಲೇಜಿನಲ್ಲಿ ಪ್ರಚಾರ ಮಾಡಿದ್ದ. ಇದರಿಂದ ಕಾಲೇಜಿನಿಂದ ಹೊರ ದಬ್ಬಿಸಿಕೊಂಡ ಇಬ್ಬರಿಗೆ ಪೊಲೀಸರು ಬುದ್ಧಿವಾದ ಹೇಳಿ ಕಳುಹಿಸಿದ್ದರು.

ತಾಳಿ ಕಟ್ಟುವ ಚಾಳಿ: ಪ್ರಜ್ಞಾಲತಾ ಮನೆಗೆ ಬಂದು ಹಿಂಸಿಸುತ್ತಿದ್ದ,ನಿನ್ನ ತಂಗಿಯನ್ನು ಅಪಹರಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ. ಸ್ಥಳೀಯ ಕಾಂಗ್ರೆಸ್ ಮುಖಂಡ ಸಂಬಂಧಿಕನಾಗಿರುವ ಪುನೀತ್, ಎಬಿವಿಪಿ, ಬಜರಂಗದಳದಲ್ಲೂ ಸಕ್ರಿಯ ಕಾರ್ಯಕರ್ತ. ಕಾಲೇಜಿನಲ್ಲಿ ಕನಿಷ್ಠವೆಂದರೂ ಮೂರ್ನಾಲ್ಕು ಯುವತಿಯರೊಡನೆ ಪ್ರೇಮದಾಟವಾಗಿ, ತಾಳಿ ಕಟ್ಟಿದ್ದಾನೆ. ಇವನ ಕಾಟಕ್ಕೆ ಹೆದರಿದ ಎಷ್ಟೋ ಹುಡುಗಿಯರು ಬೇರೆ ಕಾಲೇಜಿಗೆ, ಬೇರೆ ಊರಿಗೆ ಹೇಳದೆ ಕೇಳದೆ ಹೋಗಿದ್ದಾರೆ ಎಂಬ ಅಪವಾದ ಪುನೀತ್ ಮೇಲಿದೆ. ಪೊಲೀಸರು ಇನ್ನು ಇತನನ್ನು ಬಂಧಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+