ತಿರುವಾಂಕೂರು ರಾಣಿ ಗೌರಿ ಉಡುಪಿ ಭೇಟಿ ಕಾರಣ?

ಗೌರಿ ಅವರು ಕನಕನ ಕಿಂಡಿ ಮೂಲಕ ಕೃಷ್ಣನ ದರ್ಶನ ಮಾಡಿ, ಮುಖ್ಯಪ್ರಾಣ ದೇವರು, ಸುಬ್ರಹ್ಮಣ್ಯನಿಗೆ ಪೂಜೆ ಸಲ್ಲಿಸಿದರು. ನಂತರ ಅವರು ಪರ್ಯಾಯ ಪೀಠಾಧೀಶ ಶಿರೂರು ಶ್ರೀಗಳನ್ನು ಭೇಟಿ ಮಾಡಿ ಪ್ರಸಾದ ಸ್ವೀಕರಿಸಿದರು.[ಪದ್ಮನಾಭನ ವೈಭೋಗ ನೋಡಿರಿ]
ಅಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೌರಿ ಅವರು ಪದ್ಮನಾಭನ ಸನ್ನಿಧಿಯಲ್ಲಿ ಸಿಕ್ಕಿರುವ ಸಂಪತ್ತು ಪದ್ಮನಾಭನದು. ಈ ಸೊತ್ತನ್ನು ಅನಾದಿಕಾಲದಿಂದಲೂ ರಕ್ಷಿಸುತ್ತಾ ಬರಲಾಗಿದೆ. ಈ ಸಂಪತ್ತಿನ ಕುರಿತು ಬರುತ್ತಿರುವ ಮಾಹಿತಿಗಳು ತಮ್ಮನ್ನು ಮಾನಸಿಕವಾಗಿ ಕಾಡುತ್ತಿವೆ ಎಂದರು.
ನಂತರ ಅವರು ಕೊಲ್ಲೂರಿಗೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಅವರ ಪುತ್ರ ಭಾವಿ ರಾಜ ಆದಿತ್ಯ ಶೃಂಗೇರಿಗೆ ತೆರಳಿ ಶಾರದೆಗೆ ಪೂಜೆ ಸಲ್ಲಿಸಿದರು ಎಂದು ತಿಳಿದು ಬಂದಿದೆ. ಪ್ರತೀ ವರ್ಷ ಗೌರಿ ಮತ್ತವರ ಕುಟುಂಬ ಉಡುಪಿಗೆ ಬಂದು ಕೃಷ್ಣನಿಗೆ ಪೂಜೆ ಸಲ್ಲಿಸುವ ಪರಿಪಾಠವಿದ್ದು ತೀರಾ ಸರಳವಾಗಿರುವ ಕಾರಣ ಇವರ ಬಗ್ಗೆ ಪ್ರಚಾರ ಆಗಿರಲಿಲ್ಲ.












Click it and Unblock the Notifications