ಕುಮಾರಸ್ವಾಮಿ ಉಪವಾಸ ಸತ್ಯಾಗ್ರಹ ಅಂತ್ಯ
ಬೆಂಗಳೂರು
ಜು 10: ಉಪವಾಸವನ್ನು ಕೈಬಿಡುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮನವೊಲಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆಯಂತೆ ಅವರ ಮಂತ್ರಿ ಮಂಡಲದ ಹಿರಿಯ ಸಚಿವರು ಫ್ರೀಡಂ ಪಾರ್ಕಿನತ್ತ ದೌಡಾಯಿಸಿದ್ದು, ಕುಮಾರಸ್ವಾಮಿ ಕೆಲವೇ ಕ್ಷಣಗಳಲ್ಲಿ ತಮ್ಮ ನಿರಶನ ಕೈಬಿಡುವ ಸಾಧ್ಯತೆಗಳು ಹೆಚ್ಚಾಗಿವೆ. id="toptextpromo">ಮುಖ್ಯಮಂತ್ರಿಗಳ
ಸಂಧಾನದ ಹಿನ್ನೆಲೆಯಲ್ಲಿ ಬೆಳಗ್ಗೆ 11 ಗಂಟೆಗೆ ಜೆಡಿಎಸ್ ಕಚೇರಿಯಲ್ಲಿ ಸಭೆ ಸೇರಿ ಕುಮಾರಸ್ವಾಮಿ ಅವರ ಉಪವಾಸ ಸ್ಥಗಿತಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸಂಸದ ಚಲುವರಾಯಸ್ವಾಮಿ ಪ್ರಕಟಿಸಿದ್ದಾರೆ. ಈ ಮಧ್ಯೆ, ಸ್ಥಳಕ್ಕೆ ಯಡಿಯೂರಪ್ಪ ಅವರೇ ಬರಬೇಕೆಂದು ಜೆಡಿಎಸ್ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಿಜೆಪಿ
ಮತ್ತು ಮುಖ್ಯವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜೆಡಿಎಸ್ ವರಿಷ್ಠರ ವಿರುದ್ಧ ಮಾಡಿರುವ ಅಕ್ರಮ ಆಸ್ತಿ ಗಳಿಕೆಯ ಆರೋಪದ ಕಳಂಕವನ್ನು ತೊರೆಯಲು ತನಿಖೆಗೆ ಆಗ್ರಹಿಸಿ ಕುಮಾರಸ್ವಾಮಿ ಶನಿವಾರ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು.











Click it and Unblock the Notifications