ಎಚ್ಡಿಕೆ ಹೊಟ್ಟೆಗೆ ಮಾತ್ರ ಉಪವಾಸ ಆದರೆ ತಲೆಗೆಲ್ಲಿ?!
ಬೆಂಗಳೂರು,
ಜು.9: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೆಂಗಳೂರು ಫ್ರೀಡಂಪಾರ್ಕಿನಲ್ಲಿ ಆಮರಣಾಂತರ ಉಪವಾಸ ಸತ್ಯಾಗ್ರಹ ಕೂತಿದ್ದಾರೆ. ತಮ್ಮ ವಿರುದ್ಧ ಸಿಎಂ ಯಡಿಯೂರಪ್ಪ ಮಾಡಿರುವ ಬಹುಕೋಟಿ ಅಕ್ರಮ ಆಸ್ತಿ ಆರೋಪವನ್ನು ಸಿಬಿಐಗೆ ಒಪ್ಪಿಸುವತನಕ ತಾವು ಊಟ ಮಾಡಲ್ಲ ಎಂದು ಶಪಥ ಮಾಡಿದ್ದಾರೆ. id="toptextpromo">ಆದರೆ
ಹೊಟ್ಟೆಗೆ ಹಿಟ್ಟಿಲ್ಲದಿದ್ದರೆ ಏನಂತೆ ತಲೆತುಂಬ ಓದಲು ಪುಸ್ತಕಗಳು ಅವರ ಕೈಗೆ ಸಿಕ್ಕಿವೆ. ತನ್ನ ಬಿಡುವಿಲ್ಲದರಾಜಕೀಯ ಪಯಣದಲ್ಲಿ ಪುಸ್ತಕ ಓದಲು ಟೈಮೆಲ್ಲಿ. ಈಗ ಕುಮಾರಸ್ವಾಮಿ ಕೈಯಲ್ಲಿ ಗೌತಮಬುದ್ಧ, ವಚನ ವೇದಾಂತ, ತ.ರಾ.ಸು ಕಾದಂಬರಿ, ಪಿ ಲಂಕೇಶ್ ಟೀಕೆ ಟಿಪ್ಪಣಿ ಹಾಗೂ ಲಾಲ್ ಬಹದ್ದೂರು ಶಾಸ್ತ್ರಿ ಪುಸ್ತಕಗಳು. id='are-slot-1' class='oiad oi-axt oiadv'> id='top-searched-articles'>ಈ
ಎಲ್ಲಾ ಪುಸ್ತಕಗಳನ್ನು ಕುಮಾರಸ್ವಾಮಿ ಒಂದೇ ಉಸಿರಿನಲ್ಲಿ ಓದುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಆದರೆ ಉಪವಾಸ ಸತ್ಯಾಗ್ರಹದಲ್ಲಿರುವ ಕುಮಾರಣ್ಣ ಪುಟಗಳನ್ನಂತೂ ತಿರುವಿ ಹಾಕುತ್ತಿದ್ದಾರೆ. "ಈಗ ಓದಲು ಸಮಯ ಸಿಕ್ಕಿದೆ. ಸಾಧ್ಯವಾದಷ್ಟು ಈ ಪುಸ್ತಕಗಳನ್ನು ಓದಿ ಮುಗಿಸುತ್ತೇನೆ" ಎಂಬ ವಿಶ್ವಾಸದಲ್ಲಿದ್ದಾರೆ.











Click it and Unblock the Notifications